ಬೆಂಗಳೂರು : ಪತ್ನಿಯನ್ನು ನಡುರಸ್ತೆಯಲ್ಲೇ ಪತಿ ಗುಂಡಿಟ್ಟು ಹತ್ಯೆಗೈದ ದಾರುಣ ಘಟನೆ ಬೆಂಗಳೂರಿನ ಬಸವೇಶ್ವರ ನಗರದ ವೆಸ್ಟ್ ಇನ್ ಹೋಟೆಲ್ ಬಳಿ ಇಂದು ಸಂಜೆ ನಡೆದಿದೆ. ಬಾಲಮುರುಗನ್ ತನ್ನ ಪತ್ನಿ ಮೇಲೆ ಗುಂಡು ಹಾರಿಸಿದ ವ್ಯಕ್ತಿ. ಭುವನೇಶ್ವರಿ ಗುಂಡೇಟಿಗೆ ಗಂಭೀರ ಗಾಯಗೊಂಡು ಮೃತಪಟ್ಟ ಮಹಿಳೆ.

ಕಿರಾತಕ ಪತಿರಾಯ ಏಕಾಏಕಿ ಗನ್ ತೆಗೆದು ಪತ್ನಿ ಮೇಲೆ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸುತ್ತಿದ್ದು, ಪತ್ನಿ ಮೃತದೇಹವನ್ನು ಶಾನುಭೋಗ್ ಆಸ್ಪತ್ರೆಗೆ ರವಾಸಿದ್ದಾರೆ.
ಮಾಹಿತಿಗಳ ಪ್ರಕಾರ ಪತಿ-ಪತ್ನಿ ನಡುವೆ ಕೋರ್ಟ್‌ನಲ್ಲಿ ಡೈವೋರ್ಸ್ ಕೇಸ್ ನಡೆಯುತ್ತಿತ್ತು. ಇಂದು ಕೋರ್ಟ್ ಕೇಸ್ ಮುಗಿಸಿಕೊಂಡು ಇಬ್ಬರೂ ಹೊರ ಬಂದಿದ್ರು, ಈ ವೇಳೇ ಜಗಳ ತಾರಕಕ್ಕೇರಿದ್ದು, ಏಕಾಏಕಿ ಪತಿ ಗನ್‌ನಿಂದ ಪತ್ನಿಗೆ ಶೂಟ್ ಮಾಡಿದ್ದಾನೆ. ಆ ಬಳಿಕ ಠಾಣೆಗೆ ಹೋಗಿ ಸರೆಂಡರ್ ಆಗಿದ್ದಾನೆ. ತಮಿಳುನಾಡಿನ ಸೇಲಂ ಮೂಲದ ದಂಪತಿ ಇವರು ಎಂದು ತಿಳಿದುಬಂದಿದೆ.
ಇನ್ನು, ಬಾಲಮುರುಗನ್ ಗನ್ ಅಕ್ರಮವಾಗಿ ತರಿಸಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಸದ್ಯ ಘಟನಾ ಸ್ಥಳಕ್ಕೆ ಸೋಕೋ ಟೀಂ ಭೇಟಿ ಮಾಡಿ ಪರಿಶೀಲನೆ ನಡೆಸುತ್ತಿದೆ.
ಇದನ್ನೂ ಓದಿ : ಸಾರಿಗೆ ನಿಗಮದ ಮಹಿಳಾ ನೌಕರರಿಗೆ ಗುಡ್ನ್ಯೂಸ್ | ‘ಋತುಚಕ್ರ ರಜೆ’ಗೆ ಗ್ರೀನ್ಸಿಗ್ನಲ್


















