ದಾವಣಗೆರೆ: ಪತಿಯ ಸಾವಿನ ಸುದ್ದಿ ಕೇಳಿ ಪತ್ನಿ ಕೂಡ ಸಾವನ್ನಪ್ಪಿರುವ ಘಟನೆ ನಡೆದಿದೆ.
ಜಿಲ್ಲೆಯ (Davanagere) ಚನ್ನಗಿರಿ ತಾಲೂಕಿನ ದೇವರ ಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಸ್ತೂರಿ ರಂಗಪ್ಪ (65) ಜಯಮ್ಮ (61) ಸಾವಿನಲ್ಲೂ ಒಂದಾದ ದಂಪತಿ. ಕಸ್ತೂರಿ ರಂಗಪ್ಪ ಅವರು ಸೋಮವಾರ ಪಡಿತರ ಅಕ್ಕಿ ತರಲು ಹೋಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ಹೃದಯಾಘಾತವಾಗಿ ಕುಸಿದು ಬಿದ್ದಿದದಾರೆ. ಕೂಡಲೇ ಅವರನ್ನು ಚನ್ನಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಕಸ್ತೂರಿ ರಂಗಪ್ಪ ಅವರ ಸಾವಿನ ಸುದ್ದಿಯನ್ನ ಪತ್ನಿ ಜಯಮ್ಮ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ದೇವರಹಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆದಿದೆ.