ಬೆಂಗಳೂರು : ಇತ್ತೀಚೆಗಷ್ಟೇ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಪ್ರಕರಣವೊಂದು ನಡೆದಿತ್ತು. ಮಹಿಳೆಯನ್ನು ಬರೋಬ್ಬರಿ 59 ಪೀಸ್ ಮಾಡಿ ಫ್ರಿಜ್ ನಲ್ಲಿ ಇಡಲಾಗಿತ್ತು. ಈಗ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಮಹಾಲಕ್ಷ್ಮಿಯ ಕೋಣೆ ಮತ್ತು ಫ್ರಿಜ್ ನಿಂದ ವಶಪಡಿಸಿಕೊಂಡ ತುಂಡುಗಳನ್ನು ಶವಾಗಾರದಲ್ಲಿ ಪರೀಕ್ಷಿಸಿದಾಗ ಆತ ಬರೋಬ್ಬರಿ 59 ತುಂಡುಗಳಾಗಿ ಮಾಡಿರುವುದು ಪತ್ತೆಯಾಗಿದೆ. ಕೊಲೆಯಾಗಿರುವ ಮಹಾಲಕ್ಷ್ಮಿ ಬೆಂಗಳೂರಿನ ವೈಯಾಲಿಕಾವಲ್ ಪ್ರದೇಶದ ಮೂರು ಅಂತಸ್ತಿನ ಮನೆಯ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರು.
ಸೆಪ್ಟೆಂಬರ್ 21 ರಂದು ಮಹಾಲಕ್ಷ್ಮಿ ಅವರ ಕೋಣೆಯಲ್ಲಿ ಫ್ರಿಜ್ ಮತ್ತು ಆಕೆಯ ದೇಹದ ತುಂಡುಗಳು ಚೆಲ್ಲಾಪಿಲ್ಲಿಯಾಗಿ ಪತ್ತೆಯಾಗಿದ್ದವು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈಗಾಗಲೇ ತನಿಖೆಯಲ್ಲಿ ಕೊಲೆಗಾರ ಯಾರು ಎಂಬುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆತನ ಕುಟುಂಬವು ಮುಂಬೈನಲ್ಲಿ ವಾಸಿಸುತ್ತಿದೆ ಎಂದು ತಿಳಿದು ಬಂದಿದೆ. ಬೆಂಗಳೂರು ಪೊಲೀಸರು ಅದೇ ಕೊಲೆಗಾರನ ಸಹೋದರರಲ್ಲಿ ಒಬ್ಬನನ್ನು ಸಹ ತಲುಪಿದ್ದಾರೆ. ತಾನು ಮಹಾಲಕ್ಷ್ಮಿಯನ್ನು ಕೊಂದಿದ್ದೇನೆ ಎಂದು ತನ್ನ ಸಹೋದರನೇ ಹೇಳಿದ್ದಾನೆ ಎಂದು ಕೊಲೆಗಾರನ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ಮಹಾಲಕ್ಷ್ಮಿ ವಾಸಿಸುತ್ತಿದ್ದ ವೈಯಾಲಿಕಾವಲ್ ಪ್ರದೇಶದಲ್ಲಿನ ಮನೆಯ ಅಕ್ಕಪಕ್ಕದಲ್ಲಿನ ಕ್ಯಾಮೆರಾದಲ್ಲಿ ಆರೋಪಿಯ ಚಲನವಲನ ಕೂಡ ಪತ್ತೆಯಾಗಿದೆ ಎನ್ನಲಾಗಿದೆ. ಈಗ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿ ಸಿಕ್ಕ ನಂತರವೂ ಕೊಲೆಯ ಹಿಂದಿನ ಸಂಪೂರ್ಣ ಮಾಹಿತಿ ಹೊರ ಬೀಳಲಿದೆ.