ಬೆಂಗಳೂರು: 85 ಕೋಟಿ ರೂ. ಖರ್ಚು ಮಾಡಿ ಬಿಬಿಎಂಪಿಯಲ್ಲಿ ಕಟ್ಟಿದ ಕಟ್ಟಡ ಈಗ ವ್ಯರ್ಥವಾಗುತ್ತಿದೆ. ಪಾರ್ಕಿಂಗ್ ಗಾಗಿ ನಗರದ ಎಪಿಎಂಸಿ ಮಾರುಕಟ್ಟೆ ಬಳಿ ಬಹುಮಹಡಿ ಪಾರ್ಕಿಂಗ್ ಲಾಟ್ ನಿರ್ಮಿಸಲಾಗಿತ್ತು. ಆದರೆ, ಈಗ ಅದು ಅನಾಥವಾಗುತ್ತಿದೆ.
ಈಗ ಈ ಕಟ್ಟಡ ಕಟ್ಟಿ ಎರಡು ವರ್ಷಗಳೇ ಕಳೆದಿವೆ. ಆದರೂ ಇನ್ನು ಪಾರ್ಕಿಂಗ್ ಗಾಗಿ ಈ ಕಟ್ಟಡ ಸಿಗದೆ ಹಾಳಾಗಿ ಹೋಗುತ್ತಿದೆ. ಈ ಕಟ್ಟಡ ಸುಮಾರು 10 ಅಂತಸ್ತು ಹೊಂದಿದೆ. ಪಾರ್ಕಿಂಗ್ ಗಾಗಿಯೇ ಈ ಕಟ್ಟಡವನ್ನು ನಿರ್ಮಾಣ ಮಾಡಲಾಗಿತ್ತು. ಸುಮಾರು 750 ಕಾರು ಹಾಗೂ 110 ಬೈಕ್ ವಾಹನಗಳ ನಿಲುಗಡೆಗೆ ಈ ಪಾರ್ಕಿಂಗ್ ಲಾಟ್ ನಿರ್ಮಿಸಲಾಗಿತ್ತು. ದುಬೈ ಮಾದರಿಯಲ್ಲಿ ಈ ಪಾರ್ಕಿಂಗ್ ಲಾಟ್ ನಿರ್ಮಿಸಲಾಗಿತ್ತು.
ತುಮಕೂರು ರಸ್ತೆ, ಪೀಣ್ಯ ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಗೆಂದು ಈ ಕಟ್ಟ ನಿರ್ಮಿಸಲಾಗಿತ್ತು. ಯಶವಂತಪುರ ರೈಲ್ವೆ ನಿಲ್ದಾಣದಕ್ಕೆ ಬರುವ ವಾಹನಗಳ ಪಾರ್ಕಿಂಗ್ ಗಾಗಿಯೂ ಈ ಕಟ್ಟಡ ಬಳಸಿಕೊಳ್ಳಬಹುದು ಎಂದು ನಿರ್ಧರಿಸಲಾಗಿತ್ತು. ಆದರೆ, ರಾಜಕೀಯ ಒತ್ತಡದಿಂದಾಗಿ ಟೆಂಡರ್ ಕಾರ್ಯ ಪೂರ್ಣವಾಗುತ್ತಿಲ್ಲ.
ಟೆಂಡರ್ ಆಹ್ವಾನಿಸುವುದಕ್ಕಾಗಿ ಎಪಿಎಂಸಿ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಹೀಗಾಗಿ ಕಟ್ಟಡವು ಯಾವುದೇ ವಾಹನ ಪಾರ್ಕ್ ಆಗದೆ ಖಾಲಿ ಹೊಡೆಯುತ್ತಿದೆ. ಈ ಹಿಂದೆ ಈ ಕಟ್ಟಡದ ಪಾರ್ಕಿಂಗ್ ವ್ಯವಸ್ಥೆಗಾಗಿ ಒಂದು ಬಾರಿ ಟೆಂಡರ್ ಕರೆಯಲಾಗಿತ್ತು. ವಾರ್ಷಿಕ 12.74 ಕೋಟಿ ರೂ.ದುಬಾರಿ ಟೆಂಡರ್ ಕರೆದಿದ್ದರು. ಹೀಗಾಗಿ ಟೆಂಡರ್ ಪಡೆಯಲು ಯಾರೂ ಮನಸ್ಸು ಮಾಡಿರಲಿಲ್ಲ. ಹೀಗಾಗಿ ಅಂದಿನಿಂದ ಇಲ್ಲಿಯವರೆಗೆ ಮತ್ತೆ ಟೆಂಡರ್ ಕರೆದಿಲ್ಲ. ಅಧಿಕಾರಿಗಳ ಈ ನಿರ್ಲಕ್ಷ್ಯ ಧೋರಣೆಯಿಂದಾಗಿ ಎಪಿಎಂಸಿ ಮಾರುಕಟ್ಟೆ ಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಜನರು ಕಷ್ಟ ಪಡುವಂತಾಗಿದೆ.