ಬೀದರ್: ತಂಗಿ (Sister) ಪ್ರೀತಿಸಿದ್ದ ಯುವಕನನ್ನು, ಯುವತಿಯ ಸಹೋದರರು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಿರಗೂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರಶಾಂತ ಬಿರಾದರ್ (25) ಬರ್ಬರವಾಗಿ ಹತ್ಯೆಯಾಗಿರುವ ಯುವಕ. ಯಲ್ಲಾಲಿಂಗ ಮೇತ್ರೆ, ಪ್ರಶಾಂತ್ ಮೇತ್ರೆ ಹತ್ಯೆ ಮಾಡಿರುವ ಆರೋಪಿಗಳು ಎನ್ನಲಾಗಿದೆ.
ಕೊಲೆಯಾಗಿರುವ ಯುವಕ, ಆರೋಪಿಯ ಸಹೋದರಿಯನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಈ ವಿಷಯವಾಗಿ ಪ್ರಶಾಂತ್ ಹಾಗೂ ಯುವತಿಯ ಸಹೋದರನ ಮಧ್ಯೆ ಶುಕ್ರವಾರ ಗಲಾಟೆ ನಡೆದಿದೆ.
ಈ ವೇಳೆ ಪ್ರಶಾಂತ್ ತಲೆ ಮೇಲೆ ಕಲ್ಲು ಹಾಕಿ ಸಹೋದರರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ನ್ಯಾಮೇಗೌಡ, ಸಿಪಿಐ ಅಲಿಸಾಬ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆ ಮರೆಸಿಕೊಂಡಿದ್ದು, ಪೊಲೀಸರು ಬಲೆ ಬೀಸಿದ್ದಾರೆ.