ಭಿವಾನಿ: ಮನೆಯ ಹೊರಗೆ ನಿಂತಿದ್ದ ವ್ಯಕ್ತಿಯ ಮೇಲೆ ನಾಲ್ವರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ಹರಿಯಾಣದ ಭಿವಾನಿಯಲ್ಲಿ ನಡೆದಿದೆ.
ದಾಳಿಯ ಸಮಯದಲ್ಲಿ, ಹೊರಗೆ ನಿಂತಿದ್ದ ವ್ಯಕ್ತಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಇದು ಕಾಣುತ್ತಿದ್ದಂತೆ ಮಹಿಳೆ ಪೊರಕೆ ಹಿಡಿದು ಓಡಿ ಬಂದು ದುಷ್ಕರ್ಮಿಗಳು ಓಡಿಸಿದ್ದಾರೆ. ಈ ಫಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಸಿಸಿಟಿವಿ ದೃಶ್ಯಾವಳಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಮಹಿಳೆಯರ ಧೈರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ದಾಳಿಕೋರರು ಹರಿಕಿಶನ್ ಎಂಬಾತನ ಮೇಲೆ ಒಂಬತ್ತು ಭಾರೀ ಗುಂಡು ಹಾರಿಸಿದ್ದಾರೆ. ಹರಿಕಿಶನ್ ಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ರವಿ ಈ ಹಿಂದೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದು, ಕೆಲವು ದಿನಗಳ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದ ಎನ್ನಲಾಗಿದೆ. ಮಹಿಳೆಯೊಬ್ಬಳು ಪೊರಕೆ ಹಿಡಿದು ನಾಲ್ವರು ದುಷ್ಕರ್ಮಿಗಳನ್ನು ಅಲ್ಲಿಂದ ಹೆದರಿ ಓಡಿ ಹೋಗುವಂತೆ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಮಹಿಳೆಯ ಧೈರ್ಯ ಕಂಡು ಗಾಬರಿಗೊಂಡ ಶೂಟರ್‌ಗಳು ಸ್ಥಳದಿಂದ ಪರಾರಿಯಾಗಿದ್ದಾರೆ.