ಇತ್ತೀಚೆಗೆ ಪುಂಡರ ಹಾವಳಿ ಹೆಚ್ಚಾಗುತ್ತಿದ್ದು, ಯುವಕನೊಬ್ಬ ಸಾರಿಗೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆಯೊಂದು ನಡೆದಿದೆ.
ಬಳ್ಳಾರಿಯ ಕುರುಡುಗೋಡು ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಯುವಕನ ಏಟಿಗೆ ಸ್ಥಳದಲ್ಲೇ ಚಾಲಕ ಕುಸಿದು ಬಿದ್ದಿದ್ದಾರೆ. ಡಿ. 31ರಂದು ಈ ಘಟನೆ ನಡೆದಿದೆ. ಬಸ್ ಪಾಸ್ ವಿಚಾರಕ್ಕೆ ಈ ಘಟನೆ ನಡೆದಿದೆ. ಪವನ್ ಎಂಬ ಯುವಕ ಹಲ್ಲೆ ಮಾಡಿದವ. ಯುವಕ ತನ್ನ ಸ್ಟಾಪ್ ನಲ್ಲಿ ಇಳಿಯುವುದನ್ನು ಬಿಟ್ಟು ಹೆಚ್ಚುವರಿಯಾಗಿ ಪ್ರಯಾಣ ಮಾಡಿದ್ದಾನೆ. ಇದನ್ನು ನಿರ್ವಾಹಕ ಪ್ರಶ್ನಿಸಿದ್ದಾರೆ. ಆಗ ಯುವಕ ಗಲಾಟೆ ಮಾಡಿದ್ದಾನೆ. ಈ ವೇಳೆ ಮಧ್ಯೆ ಪ್ರವೇಶಿಸಿದ ಚಾಲಕ ಪ್ರಶ್ನಿಸಿದ್ದಾರೆ. ಆಗ ಚಾಲಕ ಭೀಮಣ್ಣ ಮೇಲೆ ಯುವಕ ಹಲ್ಲೆ ನಡೆಸಿದ್ದಾನೆ. 52 ವರ್ಷದ ಚಾಲಕರ ಮೇಲೆ 21 ವರ್ಷದ ಪುಂಡ ಯುವಕ ಹಲ್ಲೆ ನಡೆಸಿದ್ದಾನೆ.
ಪರಿಣಾಮ ಚಾಲಕ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಘಟನೆಗೆ ಬೇಸರ ವ್ಯಕ್ತಪಡಿಸಿರುವ ಸಾರಿಗೆ ಸಿಬ್ಬಂದಿ ಯುವಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಯುವಕನ ವಿರುದ್ಧ ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.