ಚಾಮರಾಜನಗರ : ಹುಲಿ ಸೆರೆಗೆ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಗ್ರಾಮದಲ್ಲಿ ನಡೆದಿದೆ.
ಪಡಗೂರು ಗ್ರಾಮದ ರೈತ ಮಹಾದೇವಸ್ವಾಮಿ ಎಂಬುವರ ಜಮೀನಿನಲ್ಲಿ ಚಿರತೆ ಸೆರೆಯಾಗಿದ್ದು, ಸೆರೆಸಿಕ್ಕ ಚಿರತೆ ಅಂದಾಜು 4 ವರ್ಷ ಪ್ರಾಯದ ಹೆಣ್ಣು ಚಿರತೆಯಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಹಲವು ದಿನಗಳಿಂದ ಪಡಗೂರು ಸುತ್ತಮುತ್ತ ಹುಲಿ ಓಡಾಟದ ಆತಂಕವನ್ನು ರೈತರು ಹೊರಹಾಕಿದ್ದರಿಂದ ತುಮಕೂರು ಮಾದರಿ ಬೋನಿಟ್ಟು ಕರುವೊಂದನ್ನು ಕಟ್ಟಲಾಗಿತ್ತು. ಆದರೆ, ಹುಲಿ ಬದಲು ಆಹಾರ ಅರಸಿ ಬಂದ ಚಿರತೆ ಈ ಬೋನಿಗೆ ಬಿದ್ದಿದೆ.
ಇದನ್ನೂ ಓದಿ : ಕೆವಿನ್ ಪೀಟರ್ಸನ್ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ಕುತ್ತು ತಂದ IPL



















