ಶಾಲಾ ವ್ಯಾನ್ ಚಾಲಕನೊಬ್ಬ 3 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.
ಜಾರ್ಖಂಡ್ ನ ಪೂರ್ವ ಸಿಂಗ್ ಭೂಮ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದೆಂತ 30 ವರ್ಷದ ಶಾಲಾ ವ್ಯಾನ್ ಚಾಲಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಗರದ ಮಾವಿನಕಟ್ಟೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಬಾಲಕಿಯ ತಾಯಿ ಶನಿವಾರ ಎಫ್ ಐಆರ್ ದಾಖಲಿಸಿದ ನಂತರ ವಿಶೇಷ ಪೊಲೀಸ್ ತಂಡವು ಆರೋಪಿ ಜೈಶ್ರೀ ತಿವಾರಿಯನ್ನು ಬಂಧಿಸಿದ್ದಾರೆ.
ಮೂರು ವರ್ಷದ ಬಾಲಕಿಯ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ಆರೋಪಿ ಚಾಲಕನನ್ನು ಭಾನುವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ. ಆ ಮಗು ನರ್ಸರಿಯಿಂದ ಸ್ಕೂಲ್ ವ್ಯಾನ್ ನಲ್ಲಿ ಮನೆಗೆ ಮರಳಿದ ನಂತರ ಹೊಟ್ಟೆ ನೋವಾಗುತ್ತಿದೆ ಎಂದು ಅಪ್ಪ-ಅಮ್ಮನ ಹತ್ತಿರ ಹೇಳಿದ್ದಾಳೆ. ಅಮ್ಮ ಪರೀಕ್ಷಿಸಿದಾಗ ಆಕೆಯ ಗುಪ್ತಾಂಗದಲ್ಲಿ ರಕ್ತ ಬರುತ್ತಿರುವುದು ಕಂಡಿದೆ. ಆಗ ಮಗುವನ್ನು ವಿಚಾರಿಸಿದಾಗ ನಡೆದ ಘಟನೆಯನ್ನು ಹೇಳಿದ್ದಾಳೆ. ಆನಂತರ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.