ಬರೋಬ್ಬರಿ 90 ಜನ ಮಹಿಳೆಯರ ಮೇಲೆ ಕಾಮುಕನೊಬ್ಬ ಅತ್ಯಾಚಾರ ನಡೆಸಿದ್ದು, ಕೋರ್ಟ್ ಆತನಿಗೆ ಜೀವಾವಧಿ ಸಿಕ್ಷೆ ವಿಧಿಸಿದೆ.
ಈತನ ವಿರುದ್ಧ ದಕ್ಷಿಣ ಆಫ್ರಿಕಾದ ನ್ಯಾಯಾಲಯ ಜೀವವಾಧಿ ಶಿಕ್ಷೆ ವಿಧಿಸಿದೆ. ಈತ 9 ವರ್ಷಗಳಲ್ಲಿ 90 ಹೆಣ್ಣು ಮಕ್ಕಳ ಮೇಲೆ ಈತ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ. ಸದ್ಯ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರ ಮೇಲೆ ಅತ್ಯಾಚಾರ, ಹಲ್ಲೆ ನಡೆಸಿದ 42 ಪ್ರಕರಣಗಳಲ್ಲಿ ಈ ವ್ಯಕ್ತಿ ಶಿಕ್ಷೆಗೆ ಗುರಿಯಾಗಿದ್ದಾನೆ. ಎಲೆಕ್ಟ್ರಿಷಿಯನ್ ಎಂದು ಹೇಳಿಕೊಂಡು ಮನೆಗಳಿಗೆ ನುಗ್ಗಿ ಅನೇಕ ಮಹಿಳೆಯರು ಮತ್ತು ಹುಡುಗಿಯರ ಜೀವನ ಹಾಳು ಮಾಡಿದ್ದಾನೆ ಎಂದು ತಿಳಿದು ಬಂದಿದೆ.
40 ವರ್ಷದ ಅಪರಾಧಿ 2012 ರಿಂದ 2021 ರವರೆಗೆ ಅಪರಾಧ ಕೃತ್ಯ ಎಸಗಿದ್ದಾನೆ. ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ಆಘಾತಕಾರಿ ಅಂಶಗಳೂ ಬೆಳಕಿಗೆ ಬಂದಿವೆ. ಆರೋಪಿ ವಿದ್ಯಾರ್ಥಿನಿಯರಿಗೆ ಹಿಂಸಾತ್ಮಕ ಮತ್ತು ಅಶ್ಲೀಲ ವೀಡಿಯೊಗಳನ್ನು ತೋರಿಸುತ್ತಿದ್ದ. ಈತ ತನ್ನ ಕುಟುಂಬಸ್ಥರ ಎದುರು ಕೂಡ ಹಲವಾರು ಕೃತ್ಯ ಎಸಗಿದ್ದಾನೆ. ಈತ ಕರುಣೆಗೆ ಯೋಗ್ಯನಲ್ಲ ಎಂದು ನ್ಯಾಯಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.