ಹರಿಯಾಣ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ.
ಸಮೀಕ್ಷೆಗಳ ಪ್ರಕಾರ ಬಿಜೆಪಿ ಹೀನಾಯ ಸೋಲು ಕಾಣಲಿದೆ. ಜೊತೆಗೆ ಪ್ರಾದೇಶಿಕ ಪಕ್ಷಗಳು ಕೂಡ ಮುಖಭಂಗ ಅನುಭವಿಸಲಿವೆ ಎನ್ನಲಾಗುತ್ತಿದೆ.
ಸಮೀಕ್ಷೆ ಸಂಸ್ಥೆಗಳು ಬಿಜೆಪಿ ಕಾಂಗ್ರೆಸ್ ಐಎನ್‌ಎಲ್‌ಡಿ ಜೆಜೆಪಿ ಇತರ
ರಿಪಬ್ಲಿಕ್ ಮ್ಯಾಟ್ರಿಜ್ 18-24 55-62 0 0-3 2-5
ಪೀಪಲ್ಸ್ ಪಲ್ಸ್ 20-32 49-61 2-3 0-1 3-5
ಧ್ರುವ್ ರೀಸರ್ಚ್ 22-32 55-64 0 0 2-8
ದೈನಿಕ್ ಭಾಸ್ಕರ್ 19-29 44-54 1-5 0-1 4-10
ಸಮೀಕ್ಷೆಗಳ ಸರಾಸರಿ 27 54 3 0 6
90 ಸದಸ್ಯರ ಬಲ ಹೊಂದಿರುವ ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 5 ರಂದು ಶನಿವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. 1,031 ಅಭ್ಯರ್ಥಿಗಳು ಕಣದಲ್ಲಿದ್ದು, ಭವಿಷ್ಯ ನಿರ್ಧಾರವಾಗಲಿದೆ.
ಜಿಂದ್‌ನಲ್ಲಿ ಅತ್ಯಧಿಕ 72 ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ನುಹ್‌ನಲ್ಲಿ ಅತಿ ಕಡಿಮೆ 21 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. 95 ಲಕ್ಷ ಪುರುಷ ಮತದಾರರು ಹಾಗೂ 85 ಲಕ್ಷ ಮಹಿಳಾ ಮತದಾರರು ಹಕ್ಕು ಚಲಾಯಿಸಿದ್ದಾರೆ. 1.83 ಕೋಟಿ ಮತದಾರರು ಹೊಸ ಸರಕಾರ ರಚನೆಯ ಭವಿಷ್ಯ ಬರೆದಿದ್ದಾರೆ.
90 ಸದಸ್ಯ ಬಲದ ಹರಿಯಾಣದಲ್ಲಿ ಬಹುಮತಕ್ಕೆ 46 ಸ್ಥಾನಗಳು ಬೇಕಾಗಿವೆ. 2019ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 90ರಲ್ಲಿ ಶೇ. 36.49 ಮತಗಳೊಂದಿಗೆ 40 ಸ್ಥಾನಗಳಲ್ಲಿ ಗೆದ್ದಿತ್ತು. ದುಶ್ಯಂತ್ ಚೌಟಾಲಾ ಅವರ ಜನನಾಯಕ್ ಜನತಾ ಪಕ್ಷ ಶೇ. 14.84 ಮತಗಳೊಂದಿಗೆ 10 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಹೀಗಾಗಿ ಎರಡೂ ಪಕ್ಷಗಳು ಸೇರಿ ಸರ್ಕಾರ ರಚಿಸಿದ್ದವು.
ಬಿಜೆಪಿಯ ಮನೋಹರ್ ಲಾಲ್ ಖಟ್ಟರ್ ಮುಖ್ಯಮಂತ್ರಿಯಾದರೆ ದುಶ್ಯಂತ್ ಚೌಟಾಲಾ ಡಿಸಿಎಂ ಆಗಿದ್ದರು. ಆಂತರ ಎರಡೂ ಪಕ್ಷಗಳು ಮೈರಿ ಮುರಿದುಕೊಂಡಿದ್ದವು. ಬಿಜೆಪಿಯೂ ಖಟ್ಟರ್ ಬದಲಿಗೆ ನಯಾಬ್ ಸಿಂಗ್ ಸೈನಿ ಅವರನ್ನು ಸಿಎಂ ಸ್ಥಾನಕ್ಕೆ ನಿಯೋಜಿಸಿತ್ತು. 2019ರ ಚುನಾವಣೆಯಲ್ಲಿ ಕಾಂಗ್ರೆಸ್ 31 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.
ಜಮ್ಮು-ಕಾಶ್ಮೀರ ವಿಧಾನಸಭೆಗೂ ಚುನಾವಣೆ ನಡೆದಿದೆ. ಇಲ್ಲಿ ಕೂಡ ಕಾಂಗ್ರೆಸ್ ಮೈತ್ರಿ ಗೆಲುವು ಸಾಧಿಸಬಹುದು ಎಂಬುವುದನ್ನು ಕಾಯ್ದು ನೋಡಬೇಕಿದೆ.