ಬೆಂಗಳೂರು: ಯುವತಿಯೊಬ್ಬಳು ಡೆತ್ ನೋಟ್ ಬರೆದಿಟ್ಟು ಪಿಜಿಯಿಂದ ಹಾರಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಬೆಂಗಳೂರಿಲ್ಲಿ ನಡೆದಿದೆ. ಪಿಜಿಯ ಐದನೇ ಮಹಡಿಯಿಂದ ಹಾರಿ ಆಂಧ್ರ ಪ್ರದೇಶದ ಕಡಪ ಮೂಲದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವೈಟ್ ಫೀಲ್ಡ್ ನಲ್ಲಿನ ಪ್ರಶಾಂತ್ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ಗೌತಮಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಬೆಂಗಳೂರಿನಲ್ಲಿ ನೆಲಸಿದ್ದ ಮೃತ ಯುವತಿ, ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ.
ಯುವತಿಯ ಡೆತ್ ನೋಟ್ ಪತ್ತೆಯಾಗಿದ್ದು, ‘ನನ್ನ ಮೃತ ದೇಹವನ್ನು ಪಿಎಂ(ಪೋಸ್ಟ್ ಮಾರ್ಟಂ) ಮಾಡಬೇಡಿ. ಯಾವುದೇ ರೀತಿಯ ತನಿಖೆ ಸಹ ನಡೆಸಬೇಡಿ. ನನ್ನ ಪೋಷಕರಿಗೆ ನನ್ನ ಮೃತ ದೇಹ ನೀಡಿ ಎಂದು ಡೆತ್ ನೋಟ್ ನಲ್ಲಿ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.