ಬಳ್ಳಾರಿ: ಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆಯಲ್ಲಿ ಬರೋಬ್ಬರಿ ಒಂದೂವರೆ ದಶಕಗಳಿಂದ ಜಿಲ್ಲೆಯಿಂದ ದೂರ ಉಳಿದಿದ್ದ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರಿಗೆ ಜಿಲ್ಲೆ ಪ್ರವೇಶಸಿಲು ಅನುಮತಿ ಸಿಕ್ಕಿದ್ದು, ಸ್ವಾಗತಿಸಲು ಬಳ್ಳಾರಿ ಸಜ್ಜಾಗುತ್ತಿದೆ.
ಶಾಶ್ವತವಾಗಿ ಬಳ್ಳಾರಿ ಜಿಲ್ಲೆ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದು, ಜಿಲ್ಲೆ ಪ್ರವೇಶಕ್ಕೆ ಇದ್ದ ನಿರ್ಬಂಧಕ್ಕೆ ತೆರೆಬಿದ್ದಂತಾಗಿದೆ. 2011ರಲ್ಲಿ ಅಕ್ರಮ ಗಣಿಗಾರಿಕೆ ಆರೋಪದಡಿ ಬಂಧನವಾಗುತ್ತಿದ್ದಂತೆ ಅಂದಿನಿಂದ ಇಲ್ಲಿಯವರೆಗೆ ಬಳ್ಳಾರಿ ಜಿಲ್ಲೆ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ನಿಂದ ನಿರ್ಬಂಧ ವಿಧಿಸಲಾಗಿತ್ತು.
ಆನಂತರ ರೆಡ್ಡಿ ಅವರು 2015ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗುತ್ತಿದ್ದಂತೆ ಅಂದಿನಿಂದ ಮಗಳ ವಿವಾಹ, ಮಾವನ ಅನಾರೋಗ್ಯ, ಕುಟುಂಬಸ್ಥರ ಭೇಟಿ ಸೇರಿದಂತೆ ಸುಪ್ರೀಂ ಕೋರ್ಟ್ ಅನುಮತಿ ಪಡೆದು ಐದಾರು ಬಾರಿ ಮಾತ್ರ ಬಳ್ಳಾರಿಗೆ ಭೇಟಿ ನೀಡಿದ್ದರು.
ಈಗ ಜಿಲ್ಲೆ ಶಾಶ್ವತವಾಗಿ ಜಿಲ್ಲೆ ಪ್ರವೇಶಕ್ಕೆ ಅನುಮತಿ ಸಿಕ್ಕಿದ್ದು, ಕುಟುಂಬಸ್ಥರು, ಅಭಿಮಾನಿಗಳು, ಆಪ್ತರು, ಕಾರ್ಯಕರ್ತರು ಸಂತಸ ವ್ಯಕ್ಪಡಿಸಿದ್ದಾರೆ. ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಕೋರ್ಟ್ ಅನುಮತಿ ಸಿಕ್ಕ ಹಿನ್ನೆಲೆಯಲ್ಲಿ ಜನಾರ್ಧನ ರೆಡ್ಡಿ ಅರು ಅ.3ರಂದು ಗುರುವಾರ ಬಳ್ಳಾರಿಗೆ ಆಗಮಿಸಲು ನಿರ್ಧರಿಸಿದ್ದಾರೆ.