ಅಸಂಖ್ಯಾತ ಅಭಿಮಾನಿ ಬಳಗ ಹೊಂದಿರುವ ನ್ಯಾಚೂರಲ್ ಬ್ಯೂಟಿ ಸಾಯಿ ಪಲ್ಲವಿ ಈಗ ಹೊಸ ಅವತಾರದಲ್ಲಿ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ.
ಸಾಯಿ ಪಲ್ಲವಿ ಆಯ್ಕೆ ಮಾಡಿಕೊಳ್ಳುವ ಪ್ರತಿಯೊಂದು ಪಾತ್ರವೂ ಅಳೆದು-ತೂಗಿ ತೆಗೆದುಕೊಂಡ ನಿರ್ಧಾರವಾಗಿರುತ್ತದೆ. ಹೀಗಾಗಿ ಅಭಿಮಾನಿಗಳು ಸಾಯಿ ಪಲ್ಲವಿ ಅವರನ್ನು ತುಂಬಾ ಇಷ್ಟ ಪಡುತ್ತಾರೆ. ಸಾಯಿ ಪಲ್ಲವಿ ಪಾತ್ರಗಳು, ಸಿನಿಮಾಗಳಲ್ಲಿ ತಮ್ಮನ್ನು ತಾವು ಪ್ರಸ್ತುತ ಪಡಿಸಿಕೊಳ್ಳುತ್ತಿರುವ ರೀತಿ, ಸಿನಿಮಾಗಳ ಹೊರಗೆ ಸಹ ಸಾಯಿ ಪಲ್ಲವಿ ನಡೆದುಕೊಳ್ಳುವ, ಮಾತನಾಡುವ, ವರ್ತಿಸುವ ರೀತಿಯಿಂದಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇತ್ತೀಚೆಗೆ ಸಾಯಿ ಪಲ್ಲವಿ ನಟಿಸಿರುವ ಚಿತ್ರಗಳು ಬಿಡುಗಡೆಯಾಗಿರಲಿಲ್ಲ. ಸಾಯಿ ಪಲ್ಲವಿ ನಟನೆಯ ಸಿನಿಮಾ ಬಿಡುಗಡೆ ಆಗಿ ಎರಡು ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಸಾಯಿ ಪಲ್ಲವಿಯನ್ನು ಮತ್ತೆ ತೆರೆಯ ಮೇಲೆ ಯಾವಾಗ ನೋಡುವುದು ಎಂದು ಅಭಿಮಾನಿಗಳು ಕಾಯುತ್ತಿದ್ದರು. ಆದರೆ, ಈಗ ಉತ್ತಮ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ದರ್ಶನ ನೀಡಿದ್ದಾರೆ.
ಸಾಯಿ ಪಲ್ಲವಿ ‘ಅಮರನ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದೆ. ಈ ಟೀಸರ್ ನಲ್ಲಿ ಕೇವಲ ಸಾಯಿ ಪಲ್ಲವಿ ಪಾತ್ರ ಮಾತ್ರ ಕಾಣಿಸಿದೆ. ಸಿನಿಮಾದ ಕತೆ ವೀರ ಯೋಧನ ಕತೆಯಾಗಿದ್ದರೂ ಸಹ ಚಿತ್ರತಂಡ ಸಾಯಿ ಪಲ್ಲವಿ ಪಾತ್ರದ ಟೀಸರ್ ನ್ನು ಮಾತ್ರ ಬಿಡುಗಡೆ ಮಾಡಿದೆ.
ಅಮರನ್’ ಸಿನಿಮಾ ವೀರಯೋಧ ಮೇಜರ್ ಮುಕುಂದ ವರದಾರಜನ್ ಅವರ ನಿಜ ಜೀವನದ ಕತೆಯನ್ನು ಆಧರಿಸಿ ಚಿತ್ರ ನಿರ್ಮಾಣ ಮಾಡಲಾಗಿದೆ. ಸಾಯಿ ಪಲ್ಲವಿ, ಮೇಜರ್ ಮುಕುಂದ ವರದಾರಜನ್ ಅವರ ಪತ್ನಿ ಇಂದು ರೆಬೆಕಾ ವರ್ಗೀಸ್ ಪಾತ್ರದಲ್ಲಿ ನಟಿಸಿದ್ದಾರೆ. 1:22 ನಿಮಿಷದ ಟೀಸರ್ ಆಗಿದ್ದು, ಟೀಸರ್ ತುಂಬ ಸಾಯಿ ಪಲ್ಲವಿ ಇದ್ದಾರೆ.
ಮೇಜರ್ ಮುಕುಂದ ವರದಾರಜನ್ ಅವರ ಪಾತ್ರದಲ್ಲಿ ನಟ ಶಿವಕಾರ್ತಿಕೇಯನ್ ನಟಿಸಿದ್ದಾರೆ. ಅವರ ಪಾತ್ರದ ಟೀಸರ್ ಇನ್ನಷ್ಟೆ ಬಿಡುಗಡೆ ಆಗಬೇಕಿದೆ.