ನವದೆಹಲಿ: ಮೋದಿ ದೇವರಲ್ಲ ಎಂದು ಆಮ್ ಆದ್ಮಿ ಪಕ್ಷದ ನಾಯಕ ಹೇಳಿದ್ದಾರೆ.
ದೆಹಲಿ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಮಂತ್ರಿ ತುಂಬಾ ಶಕ್ತಿಶಾಲಿಯಾಗಿರಬಹುದು. ಆದರೆ ಅವರು ದೇವರಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ವಿರೋಧ ಪಕ್ಷದಲ್ಲಿರುವ ನನ್ನ ಸಹೋದ್ಯೋಗಿಗಳಿಗೆ ಸದನದಲ್ಲಿ ಮನೀಷ್ ಸಿಸೋಡಿಯಾ ಹಾಗೂ ನನ್ನನ್ನು ನೋಡಿ ಬೇಸರವಾಗಿರಬೇಕು. ಪಿಎಂ ಮೋದಿ ತುಂಬಾ ಶಕ್ತಿಶಾಲಿ ಮತ್ತು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿದ್ದಾರೆ. ಮೋದಿ ದೇವರಲ್ಲ. ಆದರೆ, ದೇವರು ನಮ್ಮೊಂದಿಗಿದ್ದಾನೆ ಎಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ ಎಂದು ಕಿಡಿಕಾರಿದ್ದಾರೆ.
ನಾನು ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ, ಇಂದು ನಾನು ಮುಖ್ಯಮಂತ್ರಿಯೊಂದಿಗೆ ರಸ್ತೆ ತಪಾಸಣೆಗೆ ಹೋಗಿದ್ದೆ. ನಾನು ಜೈಲಿಗೆ ಹೋಗುವ ಮೊದಲು ದೆಹಲಿ ವಿಶ್ವವಿದ್ಯಾಲಯದ ರಸ್ತೆಗಳು ಉತ್ತಮವಾಗಿದ್ದವು. ಅಲ್ಲಿನ ರಸ್ತೆಗಳನ್ನು ದುರಸ್ತಿ ಮಾಡಲು ಆದೇಶವನ್ನು ನೀಡುವಂತೆ ನಾನು ಕೇಳಿದೆ. ಆದರೆ, ಬಿಜೆಪಿ ಶಾಸಕರೊಬ್ಬ ದೆಹಲಿ ಆಡಳಿತ ತಪ್ಪಿಸಲು ಯತ್ನಿಸಿದೇವು ಎಂದು ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ನಾಯಕರು ಎಎಪಿ ನಾಯಕರನ್ನು ಜೈಲಿಗೆ ಹಾಕಿದ್ದಾರೆ ಎಂದು ಜನರು ಹೇಳುತ್ತಾರೆ. ನೈತಿಕತೆಯ ಆಧಾರ ಮೇದೆ ನಾನು ರಾಜೀನಾಮೆನ ನೀಡಿದ್ದೇನೆ. ಆದರೆ, ತಪ್ಪಿತಸ್ಥ ಅಲ್ಲ ಎಂದು ಹೇಳಿದ್ದಾರೆ.