ಬೆಂಗಳೂರು: ಇತ್ತೀಚೆಗೆ ಹನಿಟ್ರ್ಯಾಪ್ ಸೇರಿದಂತೆ ಬ್ಲ್ಯಾಕ್ ಮೇಲ್ ದಂಧೆ ಹೆಚ್ಚಾಗುತ್ತಿವೆ. ಆದರೂ ಕೆಲವರಿಗೆ ಬುದ್ಧಿ ಬರುತ್ತಿಲ್ಲ. ಇಲ್ಲೊಬ್ಬ ವ್ಯಕ್ತಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದವಳೊಂದಿಗೆ ಖಾಸಗಿ ವಿಚಾರ ಮಾತನಾಡಿ, 1.08 ಲಕ್ಷ ರೂ. ಕಳೆದುಕೊಂಡಿರುವ ಘಟನೆ ನಡೆದಿದೆ.
23 ವರ್ಷದ ಸಂತ್ರಸ್ತ ಟೆಕ್ಕಿ, ರಿಶಿಕಾ ಶರ್ಮಾ ಎಂಬ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬೈಯಪ್ಪನಹಳ್ಳಿ ಠಾಣೆ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ. ಸೆ. 18 ರಂದು ರಿಶಿಕಾ ಶರ್ಮಾ ಹೆಸರಿನ ಫೇಸ್ ಬುಕ್ ಪ್ರೊಫೈಲ್ ನಿಂದ ಟೆಕ್ಕಿಗೆ ಮೆಸೆಂಜರ್ ಮೆಸೆಜ್ ಬಂತಿತ್ತು. ಇದಕ್ಕೆ ಸಂತ್ರಸ್ತ ವ್ಯಕ್ತಿ ರಿಪ್ಲೈ ಮಾಡಿದ್ದಾರೆ. ಆನಂತರ ಪರಿಚಯ ಹೆಚ್ಚಾಗಿದೆ. ವಾಟ್ಸಪ್ ನಂಬರ್ ಕೂಡ ಶೇರ್ ಆಗಿದೆ.
ಕೂಡಲೇ ರಿಶಿಕಾ ಏಕಾಏಕಿ ವ್ಯಾಟ್ಸಾಪ್ ವಿಡಿಯೊ ಕಾಲ್ ಮಾಡಿದ್ದು, ಸಂತ್ರಸ್ತ ಕೂಡ ರಿಸೀವ್ ಮಾಡಿದ್ದಾನೆ. ಆನಂತರ ಆತನಿಗೆ ಅಶ್ಲೀಲ ವಿಡಿಯೋ ಕಳುಹಿಸಿದ್ದಾರೆ. ಅದರಲ್ಲಿ ಆತನ ಮುಖ ಮಾರ್ಫ್ ಮಾಡಲಾಗಿದೆ. ಇದರಿಂದ ಆತ ಭಯಭೀತನಾಗಿದ್ದಾನೆ. ನಂತರ ಬ್ಲ್ಯಾಕ್ ಮೇಲ್ ಮಾಡಿ 12,500 ರೂ. ವರ್ಗಾಯಿಸುವಂತೆ ಬೇಡಿಕೆ ಇಟ್ಟಿದ್ದಳು.
ಹೆದರಿದ ಮನೋಜ್ ಹಣ ಕಳಿಸಿದ್ದರು. ಇದಾದ ನಂತರ 51 ಸಾವಿರ ಸೇರಿದಂತೆ ಪದೇ ಪದೇ ಹಣ ಕೇಳಲು ಆರಂಭಿಸಿದ್ದಾಳೆ. ಸಂತ್ರಸ್ತ ಹೆದರಿ 1,08,456 ರೂ. ಹಣ ನೀಡಿದ್ದಾನೆ. ಕೊನೆಗೆ ಬೇಸರಗೊಂಡ ಸಂತ್ರಸ್ತ ಬೈಯಪ್ಪನಹಳ್ಳಿ ಠಾಣೆಯಲ್ಲಿ ಲಿಖಿತ ದೂರು ಸಲ್ಲಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.