ಬೆಂಗಳೂರು: ತಿರುಪತಿ ಲಡ್ಡುದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಮಾಡಿರುವುದು ಖಚಿತವಾಗುತ್ತಿದ್ದಂತೆ ಆಹಾರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಈಗ ಬೆಲ್ಲದಲ್ಲಿ ಕೂಡ ಕಲಬೆರಕೆಯ ಕೆಮಿಕಲ್ ಬಳಸುವುದು ಪತ್ತೆಯಾಗಿದೆ.
ಇತ್ತೀಚೆಗೆ ಆಹಾರ ಪದಾರ್ಥಗಳಲ್ಲಿ ಕೆಮಿಕಲ್ ಬಳಕೆ ಹೆಚ್ಚಾಗುತ್ತಿರುವುದರಿಂದ ಆತಂಕ ಹೆಚ್ಚಾಗುತ್ತಿದೆ. ಪಾನಿಪುರಿ, ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ, ಕಬಾಬ್ ಹಾಗೂ ಕಾಫಿಪುಡಿಯಲ್ಲಿ ಕೆಮಿಕಲ್ ಬಳಸುತ್ತಿರುವುದು ಇತ್ತೀಚೆಗೆ ದೃಢವಾಗಿತ್ತು. ಈಗ ಬೆಲ್ಲದಲ್ಲಿಯೂ ಕೂಡ ಕಲಬೆರಕೆ ಬಣ್ಣ ಬಳಸಿರುವುದು ದೃಢವಾಗಿದೆ.
ಬೆಲ್ಲದಲ್ಲಿ ಕಲಬೆರಕೆಯ ಕೃತಕ ಬಣ್ಣ ಬಳಕೆ ಮಾಡಿರುವುದು ದೃಢಪಟ್ಟಿದೆ. ಆಹಾರ ಹಾಗೂ ಗುಣಮಟ್ಟ ಇಲಾಖೆ ವಿವಿಧ ಬೆಲ್ಲವನ್ನು ಸಂಗ್ರಹಿಸಿ ಲ್ಯಾಬ್ ರಿಪೋರ್ಟ್ಗೆ ಕಳುಹಿಸಲಾಗಿತ್ತು. ಈ ಸಂದರ್ಭದಲ್ಲಿ ಬೆಲ್ಲದಲ್ಲಿ ಕೃತಕ ಬಣ್ಣ ಬಳಕೆ ಮಾಡಿರುವುದು ಪತ್ತೆಯಾಗಿದೆ. ಈ ಬೆಲ್ಲ ತಿನ್ನುವುದರಿಂದ ಆರೋಗ್ಯದ ಮೇಲೆ ಮಾರಕ ಪರಿಣಾಮಗಳು ಉಂಟಾಗಲಿದೆ ಎಂದು ಆರೋಗ್ಯಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ದೇವಸ್ಥಾನಗಳಲ್ಲಿ ಹೆಚ್ಚಾಗಿ ಪ್ರಸಾದಕ್ಕೆ ಬೆಲ್ಲ ಬಳಕೆಯಾಗಲಿದ್ದು, ಹೀಗಾಗಿ ಬೆಲ್ಲವನ್ನ ಬಳಸುವಾಗ ಪರಿಶೀಲಿಸಿ ಬಳಸಲು ಮುಜರಾಯಿ ಇಲಾಖೆ ಧಾರ್ಮಿಕ ಹಾಗೂ ದತ್ತಿ ಇಲಾಖೆ ಆಯುಕ್ತರಿಗೆ ಆಹಾರ ಸುರಕ್ಷತೆ ಆಯುಕ್ತರು ಪತ್ರ ಬರೆದಿದ್ದಾರೆ. ಇದರಿಂದಾಗಿ ಮತ್ತೊಂದು ಆತಂಕ ಈಗ ಎಲ್ಲರನ್ನೂ ಕಾಡುತ್ತಿದೆ.