ಭಾರತಕ್ಕಾಗಿಯೇ ನನ್ನ ಜೀವನ ಮುಡಿಪು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಮೆರಿಕ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ, ನೂಯಾರ್ಕ್ ನ ನಸ್ಸೌ ವೆಟರನ್ಸ್ ಮೆಮೋರಿಯಲ್ ಕೊಲಿಜಿಯಂನಲ್ಲಿ ಅನಿವಾಸಿ ಭಾರತೀಯರನ್ನು ಉದ್ಧೇಶಿಸಿ ಮಾತನಾಡುವಾಗ ಈ ರೀತಿ ಹೇಳಿದ್ದಾರೆ. ‘ನಾನು ಸ್ವರಾಜ್ಯಕ್ಕಾಗಿ ನನ್ನ ಪ್ರಾಣವನ್ನು ತೆರಲು ಸಾಧ್ಯವಿಲ್ಲ. ಆದರೆ, ಸಮೃದ್ಧ ಭಾರತಕ್ಕೆ ನನ್ನ ಜೀವನ ಮುಡಿಪಾಗಿಟ್ಟಿದ್ದೇನೆ. ನಿಮ್ಮ ಪ್ರೀತಿ ನನಗೆ ಆಶೀರ್ವಾದವಾಗಿದೆ ಎಂದು ಹೇಳಿದರು.
ನೀವು ಭಾರತವನ್ನು ಅಮೆರಿಕಕ್ಕೆ ಮತ್ತು ಅಮೆರಿಕವನ್ನು ಭಾರತಕ್ಕೆ ಸಂಪರ್ಕಿಸಿದ್ದೀರಿ. ನಿಮ್ಮ ಕೌಶಲ್ಯ, ಪ್ರತಿಭೆ ಮತ್ತು ಬದ್ಧತೆಗೆ ಯಾವುದೇ ಸ್ಪರ್ಧೆಯಿಲ್ಲ. ನೀವು ಏಳು ಸಮುದ್ರಗಳ ಅಂತರದಲ್ಲಿ ಬಂದಿರಬಹುದು. ಆದರೆ ಯಾವುದೇ ಸಮುದ್ರವು ನಿಮ್ಮನ್ನು ಭಾರತದಿಂದ ದೂರವಿರಿಸುವಷ್ಟು ಆಳವನ್ನು ಹೊಂದಿಲ್ಲ. ಭಾರತ ಕಲಿಸಿದುದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಭಾರತದ ಮಣ್ಣಿನ ಬಗ್ಗೆ ಗುಣಗಾನ ಮಾಡಿದ್ದಾರೆ.
ವೈವಿಧ್ಯಮಯ ನಮ್ಮ ರಕ್ತದಲ್ಲಿಯೇ ಇದೆ. ನಾವು ಎಲ್ಲೇ ಹೋದರೂ ಎಲ್ಲರನ್ನು ಗೌರವಿಸುವುದೇ ಇದಕ್ಕೆ ಸಾಕ್ಷಿ ಎಂದಿದ್ದಾರೆ. AI ಅಂದ್ರೆ ಕೃತಕ ಬುದ್ಧಿಮತ್ತೆ. ಆದರೆ, ನನಗೆ AI ಎಂದರೆ ಅಮೆರಿಕ-ಭಾರತ ಎಂದು ಹೊಗಳಿದರು.