ಬೆಂಗಳೂರು: ಇತ್ತೀಚೆಗೆ ಯುವ ಪೀಳಿಗೆಯಲ್ಲಿ ರೀಲ್ಸ್ ಹುಚ್ಚು ಹೆಚ್ಚಾಗಿ ಬಿಟ್ಟಿದೆ. ರೀಲ್ಸ್ ನಿಂದ ಸಾಕಷ್ಟು ಅವಾಂತರಗಳು ನಡೆದರೂ ಯಾರೂ ಎಚ್ಚೆತ್ತುಕೊಳ್ಳುತ್ತಿಲ್ಲ. ಹೀಗಾಗಿ ಹಲವರು ಸಾವಿಗೆ ಹತ್ತಿರವಾಗುತ್ತಿದ್ದಾರೆ. ಇಲ್ಲೊಬ್ಬ ಯುವಕ ಅಂತಹ ಸಾಹಸಕ್ಕೆ ಕೈ ಹಾಕಿ ಸಾವನ್ನಪ್ಪಿದ್ದಾನೆ.
ರೀಲ್ಸ್ ಮಾಡಲು ಕೆರೆಗೆ ಹಾರಿದ ಯುವಕ ನಾಪತ್ತೆಯಾಗಿರುವ ಘಟನೆ ನಡೆದಿದೆ. ಈ ಘಟನೆ ನಗರದ ಮಾರತಹಳ್ಳಿಯ ಪಣತ್ತೂರು ಕೆರೆ(Panathur Lake)ಯಲ್ಲಿ ನಡೆದಿದೆ. ಭಾನುವಾರ ಸಂಜೆ ಈ ಘಟನೆ ನಡೆದಿದೆ.
ರೀಲ್ಸ್ ಮಾಡುವ ಸಲುವಾಗಿ ಮೂರು ಜನ ಸ್ನೇಹಿತರು ಕೆರೆಯ ಬಳಿ ಹೋಗಿದ್ದರು. ಆ ವೇಳೆ ಇಬ್ಬರು ಯುವಕರು ತನ್ನ ಸ್ನೇಹಿತನಿಗೆ ವಿಡಿಯೋ ಮಾಡಲು ಹೇಳಿ, ನೀರಲ್ಲಿ ಧುಮುಕಿದ್ದಾರೆ. ಈ ಪೈಕಿ ಓರ್ವ ನಾಪತ್ತೆಯಾಗಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.