ಹಾಸನ: ಪ್ರಜ್ವಲ್ ಪಾಪ ಒಳ್ಳೆಯ ಹುಡುಗ. ಆತನಿಗೆ ಏನೂ ಗೊತ್ತಾಗಲ್ಲ. ಮುಗ್ಧ. ಆದರೆ, ಮೂರು ವರ್ಷ ಕಾಯಿರಿ ಎಲ್ಲದಕ್ಕೂ ಉತ್ತರ ನೀಡದಿದ್ದರೆ ನಾನು ದೇವೇಗೌಡರ ಮಗನೇ ಅಲ್ಲ ಎಂದು ಶಾಸಕ ಎಚ್.ಡಿ. ರೇವಣ್ಣ ಗುಡುಗಿದ್ದಾರೆ.
ಹಾಸನದ ಆಲೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ವಿರುದ್ಧ ಷಡ್ಯಂತ್ರ ಮಾಡಿದವರು ನಮ್ಮ ಕೈಗೆ ಸಿಗದೆ ಎಲ್ಲಿಯೂ ಹೋಗುವುದಿಲ್ಲ. ದೇವೇಗೌಡರು, ಕುಮಾರಣ್ಣ, ರೇವಣ್ಣ ನಿಮ್ಮಂತಹ ಪುಣ್ಯಾತ್ಮರಿಂದ ಉಳಿದಿದ್ದಾರೆ.
ನಿಮ್ಮ ಆಶೀರ್ವಾದ ಹೀಗೆ ಇದ್ದರೆ ನಮ್ಮನ್ನು ಯಾರಿಗೂ ಏನೂ ಮಾಡಲು ಆಗುವುದಿಲ್ಲ. ಆದರೆ, ನಮ್ಮ ಕುಟುಂಬದ ವಿರುದ್ಧ ಹಗೆ ಸಾಧಿಸುತ್ತಿರುವವರಿಗೆ ಉತ್ತರ ನೀಡಿಯೇ ನೀಡುತ್ತೇನೆ ಎಂದು ಗುಡುಗಿದ್ದಾರೆ.