ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆಗೊಂಡು 7 ತಿಂಗಳು ಕಳೆದಿವೆ. ಭಾರತೀಯರ ಆರಾಧ್ಯ ದೈವ ರಾಮನನನ್ನು ನೋಡಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸುತ್ತಿರುವುದು ಈಗ ಬಹಿರಂಗವಾಗಿದೆ.
ರಾಮಮಂದಿರವು 2024ರ ಜನೇವರಿಯಲ್ಲಿ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ. ಇಷ್ಟೊಂದು ಅವಧಿಯಲ್ಲಿ ರಾಮ ಮಂದಿರಕ್ಕೆ ಬರೋಬ್ಬರಿ 11 ಕೋಟಿ ಜನ ಭಕ್ತರು ಭೇಟಿ ನೀಡಿ ರಾಮನ ದರ್ಶನ ಪಡೆದಿದ್ದಾರೆ. ಈ ಮೂಲಕ ಕಡಿಮೆ ಸಮಯದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಜನರು ಭೇಟಿ ನೀಡಿದ ಸ್ಥಳ ಎಂಬ ಹೆಗ್ಗಳಿಕೆಗೆ ರಾಮ ಮಂದಿರ ಕಾರಣವಾಗಿದೆ. ಧಾರ್ಮಿಕ ಕ್ಷೇತ್ರಗಳ ಪೈಕಿಯೂ ಆಯೋಧ್ಯೆ ಮೊದಲ ಸ್ಥಾನ ಪಡೆದುಕೊಂಡಿದೆ.
ಈ ಅವಧಿಯಲ್ಲಿ ಕಾಶಿ ವಿಶ್ವನಾಥ ದೇಗುಲಕ್ಕೆ 4.61 ಕೋಟಿ ಜನ ಭೇಟಿ ನೀಡಿದ್ದಾರೆ. ಆದರೆ, ಅಯೋಧ್ಯೆಗೆ ಬರೋಬ್ಬರಿ 11 ಕೋಟಿ ಜನ ಭೇಟಿ ನೀಡಿರುವುದು ವಿಶೇಷವಾಗಿದೆ. ಈ ಅಂಕಿ ಅಂಶವನ್ನು ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ನೀಡಿದೆ. ಇದರಲ್ಲಿ ದೇಶಿಯ ಹಾಗೂ ಅಂತಾರಾಷ್ಟ್ರೀಯ ಜನರೂ ಇದರಲ್ಲಿ ಸೇರಿದ್ದಾರೆ ಎನ್ನಲಾಗಿದೆ.
ಉತ್ತರ ಪ್ರದೇಶದ ಹಲವು ಧಾರ್ಮಿಕ ಸ್ಥಳ, ಪ್ರವಾಸಿ ತಾಣ ಸೇರಿದಂತೆ ವಿವಿಧೆಡೆ ಈ ಅವಧಿಯಲ್ಲಿ ಒಟ್ಟು 33 ಕೋಟಿ ಜನ ಭೇಟಿ ನೀಡಿದ್ದಾರೆ. ಈ ಪೈಕಿ ಆಯೋಧ್ಯೆಗೆ 11 ಕೋಟಿಯಾದರೆ, ಕಾಶಿ ವಿಶ್ವನಾಥ ದೇವಸ್ಥಾನಕ್ಕೆ 4.61 ಕೋಟಿ ಜನ ಭೇಟಿ ನೀಡಿದ್ದಾರೆ. ಇನ್ನುಳಿದಂತೆ ಪ್ರಯಾಗರಾಜ್‌ಗೆ 4.53 ಕೋಟಿ, ಮಥುರಾಗೆ 3.07 ಕೋಟಿ ಜನ ಭೇಟಿ ನೀಡಿದ್ದಾರೆ. ಆಗ್ರಾ ತಾಜ್ ಮಹಲ್ ಗೆ 69.8 ಲಕ್ಷ ಜನ ಭೇಟಿ ನೀಡಿದ್ದಾರೆ ಎಂಬುವುದನ್ನು ಅಂಕಿ -ಅಂಶ ಹೇಳುತ್ತಿದೆ.