ವಿಜಯಪುರ: ಕಾಂಗ್ರೆಸ್ ಎಂದರೆ ಮುಸ್ಲಿಂ ಪಾರ್ಟಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಭಾರತದಲ್ಲಿನ ಹಿಂದೂಗಳು ಜಾಗೃತರಾಗದಿರುವುದು ದೇಶದ ದೊಡ್ಡ ದುರಂತವಾಗಿದೆ. ಇವರೆಲ್ಲ ಮೋದಿ ಅವರ ಸೊಕ್ಕು ಕಡಿಮೆ ಮಾಡಿದ್ದೇವೆ ಅಂತಾರೆ. ಆದರೆ, ಮೋದಿಯವರ ಸೊಕ್ಕು ಕಡಿಮೆಯಾಗಲಿಲ್ಲ. ದೇಶದಲ್ಲಿ ಹಿಂದೂಗಳ ಶಕ್ತಿ ಕಡಿಮೆ ಆಯಿತು. ಮೋದಿಯವರಿಗೆ 350 ಸ್ಥಾನಗಳನ್ನು ಕೊಟ್ಟಿದ್ದರೆ, ಈ ರೀತಿ ಯಾರೂ ಸೌಂಡ್ ಮಾಡುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ದೇಶದ ಜನರು ಉಚಿತ ಯೋಜನೆ ಗ್ಯಾರಂಟಿ ಯೋಜನೆಗಳಿಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ದೇಶದಲ್ಲಿ ಹಿಂದೂಗಳು ತಲೆ ತಗ್ಗಿಸುವಂತಾಗಿದೆ. ಮುಸ್ಲಿಂರನ್ನು ತೃಪ್ತಿ ಪಡಿಸಲು ಮತ್ತೊಂದು ಭಾಗ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಹಿಂದೂಗಳು ತಿರುಗಿ ಬಿದ್ದರೆ ಕಾಂಗ್ರೆಸ್ ಉಳಿಯಲ್ಲ ದೇಶದ್ರೋಹಿಗಳು ಉಳಿಯಲ್ಲ ಎಂದು ಗುಡುಗಿದ್ದಾರೆ.
ಇದು ವಿವಾವಾದಾತ್ಮಕ ಹೇಳಿಕೆಯಲ್ಲ. ದೇಶಕ್ಕಾಗಿ ಹೇಳುತ್ತಿರುವ ಮಾತು. ಯಾರ ಮನೆಗೆ ಹೊಕ್ಕು ಹೊಡಿ ಎಂದು ಹೇಳಿಲ್ಲ. ನಮ್ಮ ಮನೆಗೆ ಬಂದು ಹೊಡೆದರೆ ನಾವು ಪ್ರತಿರೋಧ ತೋರಿಸಲೇಬೇಕು. ತೋರಿಸಲಾರದೆ ನಾವು ಶರಣಾಗಿದ್ದೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಗಣೇಶನನ್ನೇ ಅರೆಸ್ಟ್ ಮಾಡುತ್ತಾರೆ. ದೇಶಕ್ಕೆ ಗಣೇಶನಿಂದಲೇ ಸ್ವಾತಂತ್ರ ಬಂದಿದೆ ಹೊರತು ಗಾಂಧೀಜಿಯಿಂದ ಅಲ್ಲ. ಲೋಕಮಾನ ಬಾಲಗಗಂಗಾಧರನಾಥ ತಿಲಕ ಪ್ರಾರಂಭಿಸಿದ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಯಿಂದ ವಿಘ್ನಗಳು ದೂರವಾಗಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಆದರೆ, ಈಗ ಕಾಂಗ್ರೆಸ್ ಏನು ಮಾಡುತ್ತಿದೆ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದ್ದಾರೆ.