ಬೈಂದೂರು: ಉಪ್ಪುಂದದ ಜೇಸಿಐನ 20ನೇ ವರ್ಷದ “ಜೇಸಿ ಸಪ್ತಾಹ- ಸುಮನಸು 2024” ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಉಪ್ಪುಂದ ಶಾಲೆಬಾಗಿಲಿನ ಮಾತೃಶ್ರೀ ಸಭಾಭವನದಲ್ಲಿ, ಎ.ಮಂಜು ದೇವಾಡಿಗ ಅರೆಹಾಡಿ ಬಿಡುಗಡೆಗೊಳಿಸಿದರು.
ಜೇಸಿ ಅಧ್ಯಕ್ಷರಾದ ಮಂಜುನಾಥ್ ದೇವಾಡಿಗ ಅವರು ಮಾತನಾಡಿ, ಜೇಸಿ ಸಪ್ತಾಹ ಸೆಪ್ಟಂಬರ್ 16 ರಿಂದ ಸೆಪ್ಟೆಂಬರ್ 22ರವರೆಗೆ ಅದ್ಧೂರಿಯಾಗಿ ನಡೆಯಲಿದ್ದು,
ಪ್ರತಿ ದಿನವೂ ವಿಶೇಷ ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಸಾಧನಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.
ಜೇಸಿ ಸದಸ್ಯರಿಂದ, ವಿವಿಧ ಶಾಲಾ ವಿದ್ಯಾರ್ಥಿಗಳಿಂದ, ರಾಜ್ಯ ಕಂಡ ಪ್ರತಿಷ್ಠಿತ ಸಂಸ್ಥೆಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮ ಸಂಭ್ರಮದಲ್ಲಿ ನಡೆಯಲಿದೆ. ಎಲ್ಲಾ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದರು.

ಈ ಸಂದರ್ಭದಲ್ಲಿ ಸ್ಥಾಪಕಾಧ್ಯಕ್ಷರಾದ ಜೇಸಿ ದಿವಾಕರ ಶೆಟ್ಟಿ, ಸಪ್ತಾಹ ಸಭಾಪತಿ ಜೇಸಿ ಗುರುರಾಜ ಹೆಬ್ಬಾರ್, ನಿಕಟಪೂರ್ವ ಅಧ್ಯಕ್ಷರಾದ ಜೇಸಿ ಪ್ರದೀಪ್ ಶೆಟ್ಟಿ, ಪೂರ್ವಾಧ್ಯಕ್ಷರ ಗಳು,ಪದಾಧಿಕಾರಿಗಳು, ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಜೇಸಿ ನರಸಿಂಹ ವಂದಿಸಿದರು.