ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿಯುವ ಮೂಲಕ ಭಾರತ ಹಾಕಿ ತಂಡ ಸೆಮಿಫೈನಲ್ ಪ್ರವೇಶಿಸಿದೆ.
ಇಂದು ನಡೆದ ಪಂದ್ಯದಲ್ಲಿ ಬದ್ಧ ವೈರಿ ಪಾಕಿಸ್ತಾನ ತಂಡವನ್ನು ಭಾರತ 2-1 ಗೋಲುಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಕೂಡ ಭಾರತ ತನ್ನ ಅದ್ಭುತ ಆಟ ಮುಂದುವರೆಸಿತು. ಈ ಮೂಲಕ ಭಾರತ ಹಾಕಿ ತಂಡ ಯಾವುದೇ ಸೋಲು ಕಾಣದೆ ಅಥವಾ ಡ್ರಾ ಮಾಡಿಕೊಳ್ಳದೆ ಸತತ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶ ಮಾಡಿತು.

ಹರ್ಮನ್ಪ್ರೀತ್ ನಾಯಕತ್ವದ ಭಾರತ ಹಾಕಿ ತಂಡ ಅದ್ಭುತ ಆಟದೊಂದಿಗೆ ಪಾಕಿಸ್ತಾನ ತಂಡವನ್ನು 2-1 ಗೋಲುಗಳಿಂದ ಮಣಿಸಿ ಸತತ ಐದನೇ ಜಯ ದಾಖಲಿಸಿತು. ಚೀನಾದಲ್ಲಿ ನಡೆಯುತ್ತಿರುವ ಈ ಟೂರ್ನಿಯ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಿದ್ದ ಟೀಂ ಇಂಡಿಯಾ ಮತ್ತೊಮ್ಮೆ ಅಮೋಘ ಪ್ರದರ್ಶನ ನೀಡಿತು.
ಪೆನಾಲ್ಟಿ ಕಾರ್ನರ್ ಮೂಲಕ 2 ಗೋಲು ಗಳಿಸಿದ ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್ ತಂಡದ ಗೆಲುವಿನ ಹೀರೋ ಎನಿಸಿಕೊಂಡರೆ, ಆರಂಭದಲ್ಲೇ ಗೋಲು ದಾಖಲಿಸಿ ಭಾರತಕ್ಕೆ ಪಾಕ್ ಶಾಕ್ ನೀಡಿತ್ತು. ಆದರೆ, ಕೊನೆಯಲ್ಲಿ ಬಾರತ ತಂಡ 2-1 ಗೋಲುಗಳ ಮೂಲಕ ಗೆಲುವಿನ ನಗೆ ಬೀರಿತು.