ಯಾದಗಿರಿ: ಪಿಎಸ್‌ಐ ಪರಶುರಾಮ ಅವರ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ.
ಪರಶುರಾಮ ಕುಟುಂಬಸ್ಥರು ಆರೋಪಿಗಳ ಹತ್ತಿರ ಹಣ ಪಡೆದು ಸಂಧಾನ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಪರಶುರಾಮ ಅವರ ಮಾವ ಹಾಗೂ ಕುಟುಂಬಸ್ಥರ ವಿರುದ್ಧ ಈ ಆರೋಪ ಕೇಳಿ ಬಂದಿದೆ.
ಈ ಆರೋಪಕ್ಕೆ ಸಂಬಂಧಿಸಿದಂತೆ ಪರಶುರಾಮ ಅವರ ಮಾವ ವೆಂಕಟಸ್ವಾಮಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಅಳಿಯನನ್ನು ಕಳೆದುಕೊಂಡ ದುಃಖದಿಂದ ನಾವೆಲ್ಲ ಇನ್ನೂ ಹೊರ ಬಂದಿಲ್ಲ. ಆ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ಇನ್ನೂ ನಮಗೆ ಕೊಟ್ಟಿಲ್ಲ. ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ನಮ್ಮ ಮನೆಗೆ ಬಂದು ನಮ್ಮ ಮಗಳಿಂದ ಮಾಹಿತಿ ಪಡೆದಿದ್ದಾರೆ. ನಮ್ಮ ಹೋರಾಟಕ್ಕೆ ಸಾಕಷ್ಟು ಸಂಘಟನೆಗಳು ಸಹಕಾರ ನೀಡಿವೆ. ಆದೆರ, ಈಸಂದರ್ಭದಲ್ಲಿ ನಾವು ಅಂತಹ ತಪ್ಪು ಮಾಡುವುದಿಲ್ಲ. ಆದರೆ, ಪ್ರಕರಣವನ್ನು ತಪ್ಪು ದಾರಿಗೆಳೆಯಲು ಹಲವರು ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪಿಎಸ್ಐ ಪರಶುರಾಮ ಸಾವು ಪ್ರಕರಣದಲ್ಲಿ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಮತ್ತು ಅವರ ಮಗ ಪಂಪಣ್ಣಗೌಡ ಕಾರಣ ಎಂದು ಪರಶುರಾಮ ಅವರ ಪತ್ನಿ ಕೇಸ್ ದಾಖಲಿಸಿದ್ದರು. ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.