ಇಸ್ರೇಲ್(Israel)ನಿಂದ ಗಾಜಾದ ಮೇಲೆ ದಾಳಿ ನಡೆಸಿದ್ದು, 34 ಜನ ಸಾವನ್ನಪ್ಪಿದ್ದಾರೆ.
ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, 34 ಜನ ಪ್ರಾಣ ಕಳೆದುಕೊಂಡಿದ್ದಾರೆ. ಗಾಜಾದ ಶಾಲೆ ಹಾಗೂ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎನ್ನಲಾಗಿದೆ. 19 ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 34 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಗಾಜಾದಲ್ಲಿ ಕಳೆದ 11 ತಿಂಗಳಿನಿಂದ ಯುದ್ಧದ ವಾತಾವರಣ ಆವರಿಸಿದೆ. ಇಸ್ರೇಲ್ ಹಾಗೂ ಹಮಾಸ್ ಉಗ್ರರ ಕದನಕ್ಕೆ ವಿರಾಮ ಹಾಕಲು ಸಾಕಷ್ಟು ಪ್ರಯತ್ನಗಳು ನಡೆದರೂ ಅದು ಮುಂದುವರೆಯುತ್ತಲೇ ಇದೆ. ಮೃತ ಮಕ್ಕಳಲ್ಲಿ ಗಾಜಾದ ನಾಗರಿಕ ರಕ್ಷಣಾ ಸಂಸ್ಥೆಯ ಸದಸ್ಯ ಮೊಮಿನ್ ಸೆಲ್ಮಿ ಪುತ್ರಿ ಎಂದು ಗುರುತಿಸಲಾಗಿದೆ.
ಈ ಘರ್ಷಣೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ಕನಿಷ್ಠ 41,084 ಪ್ಯಾಲೆಸ್ತೇನ್ ನಾಗರಿಕರು ಸಾವನ್ನಪ್ಪಿದ್ದಾರೆ. 95,029 ಜನ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ.