ಭರತ್ ಬಾಬು ದೇವಾಡಿಗರು ಭಾರತೀಯ ಸೈನ್ಯಕ್ಕೆ ಲೆಪ್ಟಿನೆಂಟ್ ಆಗಿ ಆಯ್ಕೆಯಾದ ಹೆಮ್ಮೆಯೊಂದಿಗೆ ನಾವುಂದದ ಹಿಂದೂ ಅಭ್ಯುದಯ ಸಂಘದ ವತಿಯಿಂದ ಗೌರವ ಸಮರ್ಪಿಸಲಾಯಿತು.
ನಾವುಂದದ ಶ್ರೀ ಮಹಾಗಣಪತಿ ಮಾಂಗಲ್ಯಮಂಟಪದಲ್ಲಿ ಹಿಂದೂ ಅಭ್ಯುದಯ ಸಂಘದವರ 44ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿದಲ್ಲಿ ಲೆಪ್ಟಿನೆಂಟ್ ಭರತ್ ಬಾಬು ದೇವಾಡಿಗರನ್ನು ಅವರ ತಂದೆ-ತಾಯಿಯಾದ ಬಾಬು ದೇವಾಡಿಗ ಮತ್ತು ಶ್ರೀಮತಿ ರಾಗಿಣಿ ದೇವಾಡಿಗರ ಜೊತೆಯಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
“ನಾವುಂದ ಗ್ರಾಮದ ಬೊಬ್ಬರಮಕ್ಕಿ ಎಂಬಲ್ಲಿನ ಹುಡುಗ ತನ್ನ ಕನಸನ್ನು ನನಸಾಗಿಸಿಕೊಂಡು ಭಾರತಮಾತೆಯ ಸೇವೆಗಾಗಿ ಭಾರತೀಯ ಸೈನ್ಯಕ್ಕೆ ಆಯ್ಕೆಗೊಂಡಿದ್ದು, ನಮ್ಮೂರಿನ ಹೆಮ್ಮೆಯಾಗಿದೆ. ಅವರ ಭವಿಷ್ಯ ಉಜ್ವಲವಾಗಿರಲಿ” ಎಂದು ಹಿಂದೂ ಅಭ್ಯುದಯ ಸಂಘದವರು ಶುಭ ಹಾರೈಸಿದರು.