ಕಾಲಿವುಡ್ ಕ್ವೀನ್ ತ್ರಿಷಾ ಗ್ಲಾಮರ್ ಇನ್ನೂ ಕಡಿಮೆಯಾಗಿಲ್ಲ. ಈಗಲೂ ಅವರಿಗೆ ಬೇಡಿಕೆ ಇದೆ. ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಸದ್ಯ ಈಗ ಅವರು ಗೋಟ್ ಚಿತ್ರದ ಮೂಲಕ ಸದ್ದು ಮಾಡುತ್ತಿದ್ದಾರೆ.
ನಟಿ ತ್ರಿಷಾ ಸ್ಟಾರ್ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತಮಿಳು ಚಿತ್ರರಂಗದಲ್ಲಿ ಕಮಲ್ ಹಾಸನ್, ಸೂಪರ್ ಸ್ಟಾರ್ ರಜನಿಕಾಂತ್, ದಳಪತಿ ವಿಜಯ್, ತಲ ಅಜಿತ್, ಸೂರ್ಯ, ಆರ್ಯ, ಧನುಷ್, ಸಿಂಬು ಸೇರಿದಂತೆ ಎಲ್ಲ ಸ್ಟಾರ್ ನಟರ ಜೊತೆಗೆ ನಟಿಸಿದ ಕೆಲವೇ ಕೆಲವು ನಟಿಯರಲ್ಲಿ ತ್ರಿಷಾ ಒಬ್ಬರು. 2004 ರಲ್ಲಿ ದಳಪತಿ ವಿಜಯ್ ಅವರೊಂದಿಗೆ ‘ಗಿಲ್ಲಿ’ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದ್ದರು.
ಈ ಚಿತ್ರ ಭರ್ಜರಿಯಾಗಿ ಸದ್ದು ಮಾಡಿತು. ಹೀಗಾಗಿ ಈ ಜೋಡಿ ಅತ್ಯುತ್ತಮ ಆನ್-ಸ್ಕ್ರೀನ್ ಜೋಡಿಯಾಯಿತು. ಆನಂತರ ತ್ರಿಷಾ ಮತ್ತು ವಿಜಯ್ ‘ತಿರುಪ್ಪಾಚಿ’, ‘ಆಡು’, ‘ಆದಿ’ ಮುಂತಾದ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದರು. 2023ರಲ್ಲಿ ಬಿಡುಗಡೆಯಾಗಿ ವಿಶ್ವಾದ್ಯಂತ ಬ್ಲಾಕ್ ಬಸ್ಟರ್ ಹಿಟ್ ಆದ ಈ ಚಿತ್ರದಲ್ಲಿ ತ್ರಿಷಾ ಪಾತ್ರಕ್ಕೆ ಉತ್ತಮ ಮನ್ನಣೆ ಸಿಕ್ಕಿತು.
ರಾಜಕೀಯ ಅಂಗಳದಲ್ಲಿ ಸದ್ದು ಮಾಡಲು ಸಿದ್ಧವಾಗಿರುವ ನಟ ದಳಪತಿ ವಿಜಯ್ ನಟನೆಯ ‘ಗೋಟ್’ ಚಿತ್ರವು ವಿಶ್ವಾದ್ಯಂತ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಈ ಚಿತ್ರದಲ್ಲಿ ಹಲವು ಸ್ಟಾರ್ ಕಲಾವಿದರು ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ‘ಮಟ್ಟ’ ಹಾಡಿನಲ್ಲಿ ನಟಿ ತ್ರಿಷಾ ವಿಜಯ್ ಅವರೊಂದಿಗೆ ನೃತ್ಯ ಮಾಡುವುದು ಮತ್ತು ವಿಶೇಷವಾಗಿ ಗಿಲ್ಲಿ ಸಿನಿಮಾದ ಹಾಡನ್ನು ಮರುಸೃಷ್ಟಿಸಿರುವುದು ಅಭಿಮಾನಿಗಳ ಗಮನ ಸೆಳೆದಿದೆ.
ಈ ಮಧ್ಯೆ ‘ಗೋಟ್’ ಚಿತ್ರದ ‘ಮಟ್ಟ’ ಹಾಡಿಗೆ ನಟಿ ತ್ರಿಷಗೆ ಎಷ್ಟು ಸಂಭಾವನೆ ಸಿಕ್ಕಿದೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಈ ಹಾಡಿನಲ್ಲಿ ನೃತ್ಯ ಮಾಡಲು ನಟಿ ತ್ರಿಷಾ ಸುಮಾರು 1.2 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.