ನವದೆಹಲಿ: ಬೀದಿಯಲ್ಲಿ ನಮ್ಮನ್ನು ಎಳೆದಾಡಿದಾಗ ನಮ್ಮ ಬೆನ್ನಿಗೆ ಬಿಜೆಪಿ ಹೊರತು ಪಡಿಸಿ ಎಲ್ಲ ಪಕ್ಷಗಳು ಇದ್ದವು ಎಂದು ಕುಸ್ತಿ ಪಟು ವಿನೇಶ್ ಫೋಗಟ್ ಹೇಳಿದ್ದಾರೆ.
ಕುಸ್ತಿ ಬಜರಂಗ್ ಪೂನಿಯಾ ಹಾಗೂ ವಿನೇಶ್ ಫೋಗಟ್ ಇಂದು ಕಾಂಗ್ರೆಸ್ ಸೇರಿದ್ದಾರೆ. ಈ ವೇಳೆ ಮಾತನಾಡಿದ ಫೋಗಟ್, ಬಿಜೆಪಿಯ ವರ್ತನೆ ನಮ್ಮ ಕಷ್ಟದ ಸಂದರ್ಭದಲ್ಲಿ ಕಿಚಾಯಿಸಿದಂತಿತ್ತು. ನಮ್ಮ ಬೆನ್ನಿಗೆ ನಿಂತವರೇ ಕಷ್ಟದಲ್ಲಾಗುವವರು. ನಮ್ಮನ್ನು ಬೀದಿಯಲ್ಲಿ ಎಳೆದಾಡಿದಾಗ ನಮ್ಮ ಬೆನ್ನಿಗೆ ಕಾಂಗ್ರೆಸ್ ಇತ್ತು. ಹೀಗಾಗಿ ನಾವು ಆ ಪಾಕ್ಷಕ್ಕೆ ಋಣಿಯಾಗಿದ್ದೇವೆ ಎಂದು ಹೇಳಿದ್ದಾರೆ.
ನಮ್ಮನ್ನು ಬೀದಿಯಲ್ಲಿ ಎಳೆದಾಡಿದಾಗ ನಾವು ನೋವನ್ನು ಉಂಡಿದ್ದೇವೆ. ನೋವುಂಡ ಮಹಿಳಾ ಕುಸ್ತಿಪಟುಗಳ ಜೊತೆಗೆ ನಾವಿದ್ದೇವು ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಬಿಜೆಪಿಯ ಮಾಜಿ ಸಂಸದ ಮತ್ತು ಭಾರತ ಕುಸ್ತಿ ಫೇಡರೇಶನ್ ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯ ಖಂಡಿಸಿ ನಡೆದ ಹೋರಾಟದಲ್ಲಿ ವಿನೇಶ್ ಫೋಗಟ್ ಹಾಗೂ ಬಜರಂಗ್ ಪೂನಿಯಾ ಇದ್ದರು. ವಿನೇಶ್ ಫೋಗಟ್ ಇತ್ತೀಚೆಗೆ ನಡೆದ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಫೈನಲ್ ವರೆಗೆ ತಲುಪಿದ್ದರು. ಆದರೆ, ಕೇವಲ 200 ಗ್ರಾಂ ತೂಕ ಹೆಚ್ಚಾಗಿದ್ದರಿಂದಾಗಿ ಸ್ಪರ್ಧೆಯಿಂದ ಅವರನ್ನು ಕೈ ಬಿಡಲಾಗಿತ್ತು.
ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇಡೀ ಭಾರತವೇ ಈ ಘಟನೆಯನ್ನು ಖಂಡಿಸಿತ್ತು. ಸದ್ಯ ರೈಲ್ವೆ ಇಲಾಖೆಯ ಕೆಲಸಕ್ಕೆ ರಾಜೀನಾಮೆ ನೀಡಿ ವಿನೇಶ್ ಫೋಗಟ್ ಈಗ ಕಾಂಗ್ರೆಸ್ ಸೇರಿದ್ದಾರೆ. ಹರಿಯಾಣದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಇಬ್ಬರೂ ಆಟಗಾರರು ಸ್ಪರ್ಧಿಸಬಹುದು ಎಂಬ ಮಾತು ಕೇಳಿ ಬರುತ್ತಿವೆ. ಆದರೆ, ಇದುವರೆಗೆ ಸ್ಪರ್ಧೆ ಮಾಡುವ ವಿಚಾರ ಬಹಿರಂಗವಾಗಿಲ್ಲ.