ಆನೇಕಲ್: ಗೆಳತಿಯನ್ನು ಖುಷಿಯಿಂದ ಇಡುವುದಕ್ಕಾಗಿ ಕಳ್ಳತನಕ್ಕೆ ಇಳಿದು ವ್ಯಕ್ತಿಯೊಬ್ಬ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.
ತಾನು ಪ್ರೀತಿಸುತ್ತಿದ್ದ ಪ್ರೇಯಸಿಯೊಂದಿಗೆ ಹೈಫೈ ಲೈಫ್ ಕಳೆಯುವುದಕ್ಕಾಗಿ ಮನೆ ಕಳ್ಳತನಕ್ಕೆ ಇಳಿದಿದ್ದ ಪ್ರೇಮಿಯನ್ನು (Theft Case) ಈಗ ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಆನೇಕಲ್ ತಾಲೂಕಿನ ವಾಬಸಂದ್ರದಲ್ಲಿ ಮನೆ ಕಳ್ಳತನವಾಗಿತ್ತು. ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಯನ್ನು ಹಿಡಿದಿದ್ದಾರೆ.
ಬಂಧಿತ ಆರೋಪಿಯಿಂದ 8 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ. ಲಕ್ಷ್ಮಣ್ ಅಲಿಯಾಸ್ ಗುನ್ನಿ ಬಂಧಿತ ಪ್ರೇಮಕೈದಿ. ಆರೋಪಿ ವಿರುದ್ಧ ಚಿಕ್ಕದಾಸರಹಳ್ಳಿಯ ಲಕ್ಷ್ಮಣ್ ವಿರುದ್ಧ ಬನ್ನೇರುಘಟ್ಟ ,ಜಿಗಣಿ, ಸರ್ಜಾಪುರ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣ ದಾಖಲಾಗಿವೆ. ಲಕ್ಷ್ಮಣನ್ನು ಬಂಧಿಸಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಈತ ಪ್ರೇಯಸಿಯೊಂದಿಗೆ ಎಂಜಾಯ್ ಮಾಡಬೇಕೆಂದು ಕಳ್ಳತನ ಮಾಡುತ್ತಿರುವುದಾಗಿ ಹೇಳಿದ್ದಾನೆ. ಕದ್ದ ಚಿನ್ನ ಬೆಳ್ಳಿ ಮಾರಾಟ ಮಾಡಿ ಪ್ರೇಯಸಿಗೆ ಖರ್ಚು ಮಾಡುತ್ತಿದ್ದ ಎಂಬುವುದನ್ನು ಪೊಲೀಸರ ಮುಂದೆ ಹೇಳಿದ್ದಾನೆ. ಸದ್ಯ ಆರೋಪಿ ಬಂಧಿಸಿರುವ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.