ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renuka Swamy Murder Case) ಆರೋಪಿಗಳು ಜೈಲಿನಲ್ಲಿದ್ದಾರೆ. ಈಗ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ಚಾರ್ಜ್‌ಶೀಟ್ (Chargesheet) ಸಲ್ಲಿಕೆ ಮಾಡಿದ್ದಾರೆ. ಆದರೆ, ಚಾರ್ಜ್ ಶೀಟ್ ನಲ್ಲಿ ಪೊಲೀಸರು ಉಲ್ಲೇಖಿಸಿರುವ ಹಲವು ವಿಚಾರಗಳಿಗೆ ದರ್ಶನ್ ಶಾಕ್ ಆಗಿದ್ದಾರೆ ಎನ್ನಲಾಗಿದೆ.
ಚಾರ್ಜ್ ಶೀಟ್ ನಲ್ಲಿ ಹಲವಾರು ಅಂಶಗಳನ್ನು ಕೇಳಿ ಬಳ್ಳಾರಿ ಜೈಲಿನಲ್ಲಿ (Ballari Jail) ದರ್ಶನ್ ಶಾಕ್ ಗೆ ಒಳಗಾಗಿದ್ದಾರೆ. ಚಾರ್ಜ್‌ಶೀಟ್ ಸಲ್ಲಿಕೆ ಆಗುವ ವಿಚಾರ ತಿಳಿದು ನಿನ್ನೆ ರಾತ್ರಿಯಿಂದ ದರ್ಶನ್ (Darshan) ಊಟ, ನಿದ್ದೆ ಮಾಡಿರಲಿಲ್ಲ ಎನ್ನಲಾಗಿದೆ.
ತಮ್ಮ ಸೆಲ್ ಬಳಿ ಬಂದ ಸಿಬ್ಬಂದಿಯನ್ನು ದರ್ಶನ್ ಪದೇ ಪದೇ ಚಾರ್ಜ್ ಶೀಟ್ ಬಗ್ಗೆಯೇ ಮಾತನಾಡಿಸಿದ್ದಾರೆ ಎನ್ನಲಾಗಿದೆ. ಆರೋಪಪಟ್ಟಿಯಲ್ಲಿ ಏನೆಲ್ಲಾ ಅಂಶಗಳಿವೆ ಎಂಬುದನ್ನು ಪದೇ ಪದೇ ಕೇಳಿ ತಿಳಿದುಕೊಂಡಿದ್ದಾರೆ. 231 ಸಾಕ್ಷಿಗಳ ಸಂಖ್ಯೆ ಕೇಳಿ ಈ ದಿಗ್ಭ್ರಾಂತರಾಗಿದ್ದಾರೆ ಎನ್ನಲಾಗಿದೆ. ಅಲ್ಲದೇ, ಜೈಲಿನಲ್ಲಿ ಚಿಂತೆಯಲ್ಲಿಯೇ ಮುಳುಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.