ಉಕ್ರೇನ್ ನ (Ukraine) ಪೋಲ್ಟವಾ ಮೇಲೆ ರಷ್ಯಾದ (Russia) ಕ್ಷಿಪಣಿ ದಾಳಿ ನಡೆದಿದ್ದು, ಕನಿಷ್ಠ 41 ಜನ ಸಾವನ್ನಪ್ಪಿದ್ದಾರೆ ಮತ್ತು 180 ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelenskiy) ಹೇಳಿದ್ದಾರೆ.
ಸಾಮಾಜಿಕ ಜಾಲತಾಮದಲ್ಲಿ ಈ ಕುರಿತು ಬರೆದುಕೊಂಡಿರು ಝೆಲೆನ್ಸ್ಕಿ, “ಪೋಲ್ಟವಾದಲ್ಲಿ ರಷ್ಯಾದ ದಾಳಿ ಬಗ್ಗೆ ನನಗೆ ಪ್ರಾಥಮಿಕ ವರದಿಗಳು ಬಂದವು. ಲಭ್ಯವಿರುವ ಮಾಹಿತಿಯಂತೆ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಈ ಪ್ರದೇಶ ಮೇಲೆ ದಾಳಿ ನಡೆದಿದೆ. ಅವರು ಶಿಕ್ಷಣ ಸಂಸ್ಥೆ ಮತ್ತು ಹತ್ತಿರದ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡಿದ್ದಾರೆ. ದೂರಸಂಪರ್ಕ ಸಂಸ್ಥೆಯ ಕಟ್ಟಡಗಳಲ್ಲಿ ಒಂದನ್ನು ಭಾಗಶಃ ನಾಶಪಡಿಸಿದ್ದಾರೆ ಎಂದು ಹೇಳಿದ್ದಾರೆ.
ದಾಳಿಯಲ್ಲಿ 41 ಜನರು ಸಾವನ್ನಪ್ಪಿದ್ದು, 180ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಹಲವರನ್ನು ರಕ್ಷಿಸಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ, ಘಟನೆಯಲ್ಲಿ ಹಲವರನ್ನು ರಕ್ಷಿಸಲಾಗಿದೆ. 180ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ದುರದೃಷ್ಟವಶಾತ್ ಹಲವಾರು ಸಾವು-ನೋವುಗಳು ಸಂಭವಿಸಿವೆ. ಇಲ್ಲಿಯವರೆಗೆ 41 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಸಾವನ್ನಪ್ಪಿದ ಎಲ್ಲಾ ಸಂಬಂಧಿಕರು ಮತ್ತು ಪ್ರೀತಿಪಾತ್ರರಿಗೆ ನನ್ನ ಸಂತಾಪಗಳು” ಎಂದು ಅಧ್ಯಕ್ಷ ಝೆಲೆನ್ಸ್ಕಿ ಬರೆದುಕೊಂಡಿದ್ದಾರೆ.