ನವದೆಹಲಿ: ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತೀಯ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈಗಾಗಲೇ ಭಾರತ 5 ಪದಕ ಗೆದ್ದ ಸಾಧನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗೆದ್ದ ಸಾಧಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಪದಕ ವಿಜೇತರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಮೋದಿ ಅಭಿನಂದಿಸಿದ್ದಾರೆ. ಮೋನಾ ಅಗರ್ವಾಲ್, ಪ್ರೀತಿ ಪಾಲ್, ಮನೀಶ್ ನರ್ವಾಲ್, ರುಬಿನಾ ಫ್ರಾನ್ಸಿಸ್ ಅವರೊಂದಿಗೆ ಪ್ರಧಾನಿ ಮಾತನಾಡಿ ಶುಭ ಹಾರೈಸಿದ್ದಾರೆ ಎನ್ನಲಾಗಿದೆ.
ಭಾರತಕ್ಕೆ ಶೂಟಿಂಗ್ ನಲ್ಲಿ ಚಿನ್ನದ ಪದಕ ತಂದು ಕೊಟ್ಟ ಶೂಟರ್ ಆವನಿ ಲೇಖರ ಅವರು ಈ ವೇಳೆ ಸ್ಪರ್ಧೆಯೊಂದರಲ್ಲಿ ಪಾಲ್ಗೊಂಡಿದ್ದರಿಂದ ಪ್ರಧಾನಿಗಳ ಫೋನ್ ಸಂವಾದಕ್ಕೆ ಸಿಕ್ಕಿಲ್ಲ. ಹೀಗಾಗಿ ಇನ್ನಿತರ ಪ್ರತಿಯೊಬ್ಬ ವಿಜೇತರೊಂದಿಗೆ ಪ್ರಧಾನಿ ಮಾತನಾಡಿದ್ದಾರೆ.
ಸಮ್ಮರ್ ಒಲಿಂಪಿಕ್ಸ್ ನಡೆದ ನಂತರ ಪ್ಯಾರಾಲಿಂಪಿಕ್ಸ್ ನಡೆಯುತ್ತದೆ. ಕೆಲವು ತಿಂಗಳ ನಂತರ ವಿಂಟರ್ ಒಲಿಂಪಿಕ್ಸ್ ಕೂಡ ನಡೆಯುತ್ತದೆ. ಈ ಬಾರಿಯ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತ ಒಂದು ಚಿನ್ನ, ಒಂದು ಬೆಳ್ಳಿ ಮತ್ತು ಮೂರು ಕಂಚಿನ ಪದಕ ಗೆದ್ದಿದೆ. ಇನ್ನೂ ಹೆಚ್ಚಿನ ಪದಕ ಗೆಲ್ಲುವ ನಿರೀಕ್ಷೆಯಲ್ಲಿ ಭಾರತೀಯರು ಇದ್ದಾರೆ.