ತೆಲುಗು ಸ್ಟಾರ್ ನಟ ಜೂ ಎನ್ ಟಿಆರ್ ಕರುನಾಡ ಪ್ರವಾಸದಲ್ಲಿದ್ದು, ಇಂದು ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನ ಪಡೆದಿದ್ದಾರೆ.
ಸ್ಟಾರ್ ನಟ ಶನಿವಾರವಷ್ಟೇ ಪತ್ನಿ ಮತ್ತು ತಾಯಿಯ ಜೊತೆಗೆ ಮಂಗಳೂರಿಗೆ ಬಂದಿಳಿದಿದ್ದರು. ಜೂ ಎನ್ ಟಿಆರ್ ಅವರನ್ನು ನಟ ರಿಷಬ್ ಶೆಟ್ಟಿ ಸ್ವಾಗತಿಸಿದ್ದರು. ಜೂ ಎನ್ ಟಿಆರ್ ತಾಯಿಯವರ ಆಸೆಯಂತೆ ಅವರ ಹುಟ್ಟೂರಾದ ಕುಂದಾಪುರಕ್ಕೆ ಕರೆದುಕೊಂಡು ಬಂದಿದ್ದರು. ಈ ವೇಳೆ ಜೂ. ಎನ್ ಟಿ ಆರ್ ಹಾಗೂ ಕುಟುಂಬದವರು ಉಡುಪಿ ಶ್ರೀಕೃಷ್ಣನ ದರ್ಶನ ಪಡೆದಿದ್ದರು.

ಜೂ ಎನ್ಟಿಆರ್ ಕುಟುಂಬದ ಜೊತೆಗೆ ರಿಷಬ್ ಶೆಟ್ಟಿ ಕುಟುಂಬ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಕುಟುಂಬ ಸಹ ಸೇರಿಕೊಂಡಿತ್ತು. ಭಾನುವಾರ ಜೂ ಎನ್ ಟಿಆರ್ ಹಾಗೂ ಪ್ರಶಾಂತ್ ನೀಲ್ ಅವರ ಟೆಂಪಲ್ ರನ್ ಮುಂದುವರೆದಿದ್ದು, ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿ, ತಾಯಿಯ ದರ್ಶನ ಪಡೆದಿದ್ದಾರೆ.
ಈ ವೇಳೆ ಜೂ. ಎನ್ ಟಿ ಆರ್ ಕುಟುಂಬದೊಂದಿಗೆ ನಟ ತಾರಕ್ ರಾಮ್, ರಿಷಬ್, ಪ್ರಶಾಂತ್ ನೀಲ್ ಕುಟುಂಬಸ್ಥರು ಇದ್ದರು. ಈ ವೇಳೆ ತಾಯಿ ಶಾಲಿನಿ ನಂದಮೂರಿ, ಪತ್ನಿ ಲಕ್ಷ್ಮೀ ಪ್ರಣತಿ, ಪ್ರಗತಿ ರಿಷಬ್ ಶೆಟ್ಟಿ, ಪ್ರಶಾಂತ್ ನೀಲ್, ಲಿಖಿತಾ ನೀಲ್ ಅವರನ್ನು ಕೊಲ್ಲೂರು ಆಡಳಿತ ಮಂಡಳಿ ಸನ್ಮಾನಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಜೂ. ಎನ್. ಟಿಆರ್, ಕೊಲ್ಲೂರು ದೇವಿಯ ದರ್ಶನ ತುಂಬಾ ಚೆನ್ನಾಗಿ ಆಯಿತು. ಮೂಕಾಂಬಿಕೆಯ ದರ್ಶನ ಮಾಡಿಸಿದ್ದ ರಿಷಬ್ ಅವರಿಗೆ ತುಂಬಾ ಧನ್ಯವಾದಗಳು. ಕರ್ನಾಟಕಕ್ಕೆ ಬಂದಿರುವುದು ಖುಷಿ ನೀಡಿದೆ ಎಂದು ಹೇಳಿದ್ದಾರೆ.