ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್ ರನ್ನು ಭೇಟಿ ಮಾಡಲು ಪತ್ನಿ ವಿಜಯಲಕ್ಷ್ಮೀ ಬಳ್ಳಾರಿ ಜೈಲಿಗೆ ಇಂದು ತೆರಳಿದ್ದಾರೆ.
ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಜೈಲು ಸೇರಿರುವ ನಟ ದರ್ಶನ್ ರನ್ನು ಪತ್ನಿ ವಿಜಯಲಕ್ಷ್ಮೀ ವಾರಕ್ಕೊಮ್ಮೆ ಬಂದು ಭೇಟಿ ಮಾಡುತ್ತಿದ್ದರು. ಆದರೆ, ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಐಷಾರಾಮಿ ಜೀವನ ಸಾಗಿಸುತ್ತಿರುವುದು ಸಾಬೀತಾಗುತ್ತಿದ್ದಂತೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಹೀಗಾಗಿ ದರ್ಶನ್ ಬಂದ ಎರಡು ದಿನಗಳ ನಂತರ ಪತ್ನಿ ವಿಜಯಲಕ್ಷ್ಮೀ ಜೈಲಿಗೆ ಬಂದು ದರ್ಶನ್ ರ ಆರೋಗ್ಯ ವಿಚಾರಿಸಿದ್ದಾರೆ. ಆದರೆ, ಜೈಲಿನಿಂದ ಹೊರಗೆ ಹೋಗುವಾಗ ಭಾರವಾದ ಹೃದಯದಿಂದ ಹೊರ ಹೋಗಿದ್ದಾರೆ.
ದರ್ಶನ್ ಭೇಟಿಗೆ ಬಂದಿದ್ದ ವಿಜಯಲಕ್ಷ್ಮಿ ಅವರು ತಂದಿದ್ದ ಎಲ್ಲ ವಸ್ತುಗಳನ್ನು ಪರಿಶೀಲನೆ ನಡೆಸಿದ ಪೊಲೀಸರು ನಂತರ ಅವರನ್ನು ಒಳಗೆ ಕಳುಹಿಸಿದ್ದರು. ದರ್ಶನ್ ಗಾಗಿ ಒಂದು ಚೀಲದಲ್ಲಿ ಕೆಲವು ವಸ್ತುಗಳನ್ನು ವಿಜಯಲಕ್ಷ್ಮಿ ತಂದಿದ್ದರು. ಆ ವಸ್ತುಗಳನ್ನು ದರ್ಶನ್ ತಮ್ಮ ಬ್ಯಾರಕ್ ಗೆ ತೆಗೆದುಕೊಂಡು ಹೋದರು ಎಂದು ತಿಳಿದು ಬಂದಿದೆ. ಕಾನೂನು ಹೋರಾಟದ ಮೂಲಕ ಪತಿಯನ್ನು ಹೊರ ತರಲು ಪತ್ನಿ ವಿಜಯಲಕ್ಷ್ಮೀ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ.