ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಗೆ ಸಿದ್ಧತೆ ನಡೆದಿದೆ. ಈಗ ಟೂರ್ನಿಗಾಗಿ 6 ತಂಡಗಳನ್ನು ಪ್ರಕಟಿಸಲಾಗಿದೆ. ಐಪಿಎಲ್ ನಲ್ಲಿದ್ದ ದಿನೇಶ್ ಕಾರ್ತಿಕ್ ಹಾಗೂ ಶಿಖರ್ ಧವನ್ ಈ ಬಾರಿ ಲೆಜೆಂಡ್ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ.
ಎಲ್ಎಲ್ಸಿ ಸೀಸನ್-3 ರಲ್ಲಿ ಕಣಕ್ಕಿಳಿಯಲಿರುವ 6 ತಂಡಗಳ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಕೊನಾರ್ಕ್ ಸೂರ್ಯಸ್ ಒಡಿಶಾ ತಂಡ: ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಕೆವಿನ್ ಓ ಬ್ರಿಯಾನ್, ರಾಸ್ ಟೇಲರ್, ವಿನಯ್ ಕುಮಾರ್, ರಿಚರ್ಡ್ ಲೆವಿ, ದಿಲ್ಶನ್ ಮುನವೀರ, ಶಹಬಾಜ್ ನದೀಮ್, ಫಿಡೆಲ್ ಎಡ್ವರ್ಡ್ಸ್, ಬೆನ್ ಲಾಫ್ಲಿನ್, ರಾಜೇಶ್ ಬಿಷ್ಣೋಯ್, ಪ್ರವೀಣ್ ತಾಂಬೆ, ದಿವೇಶ್ ಪಠಾನಿಯಾ, ಕೆಪಿ ಅಪ್ಪಣ್ಣ, ಅಂಬಾಟಿ ರಾಯುಡು ಸ್ಥಾನ ಪಡೆದಿದ್ದಾರೆ.
ಮಣಿಪಾಲ್ ಟೈಗರ್ಸ್ ತಂಡ: ಹರ್ಭಜನ್ ಸಿಂಗ್, ರಾಬಿನ್ ಉತ್ತಪ್ಪ, ತಿಸಾರ ಪೆರೆರಾ, ಶೆಲ್ಡನ್ ಕಾಟ್ರೆಲ್, ಡೇನಿಯಲ್ ಕ್ರಿಶ್ಚಿಯನ್, ಏಂಜೆಲೊ ಪೆರೆರಾ, ಮನೋಜ್ ತಿವಾರಿ, ಅಸೆಲಾ ಗುಣರತ್ನೆ, ಸೊಲೊಮನ್ ಮಿರೆ, ಅನುರೀತ್ ಸಿಂಗ್, ಅಬು ನೆಚಿಮ್, ಅಮಿತ್ ವರ್ಮಾ, ಇಮ್ರಾನ್ ಖಾನ್, ರಾಹುಲ್ ಶುಕ್ಲಾ, ಅಮಿತೋಜ್ ಸಿಂಗ್, ಪ್ರವೀಣ್ ಗುಪ್ತಾ, ಸೌರಭ್ ಗುಪ್ತಾ ಸ್ಥಾನ ಪಡೆದಿದ್ದಾರೆ.
ಇಂಡಿಯಾ ಕ್ಯಾಪಿಟಲ್ಸ್ ತಂಡ: ಮುರಳಿ ವಿಜಯ್, ಧವಲ್ ಕುಲಕರ್ಣಿ, ಆಶ್ಲೇ ನರ್ಸ್, ಬೆನ್ ಡಂಕ್, ಡ್ವೇನ್ ಸ್ಮಿತ್, ಕಾಲಿನ್ ಡಿ ಒರಂಡ್ಹೋಮ್, ನಮನ್ ಓಜಾ, ಕ್ರಿಸ್ ಎಂಪೋಫು, ಫೈಜ್ ಫಜಲ್, ಇಕ್ಬಾಲ್ ಅಬ್ದುಲ್ಲಾ, ಕಿರ್ಕ್ ಎಡ್ವರ್ಡ್ಸ್, ರಾಹುಲ್ ಶರ್ಮಾ, ಪಂಕಜ್ ಸಿಂಗ್, ಜ್ಞಾನೇಶ್ವರ ರಾವ್, ಭರತ್ ಚಿಪ್ಲಿ, ಪರ್ವಿಂದರ್ ಅವಾನಾ, ಪವನ್ ಸುಯಲ್, ಮುರಳಿ ಸುಯಲ್, ಇಯಾನ್ ಬೆಲ್ ಸ್ಥಾನ ಪಡೆದಿದ್ದಾರೆ.
ಗುಜರಾತ್ ತಂಡ: ಶಿಖರ್ ಧವನ್, ಮೊಹಮ್ಮದ್ ಕೈಫ್, ಕ್ರಿಸ್ ಗೇಲ್, ಲಿಯಾಮ್ ಪ್ಲಂಕೆಟ್, ಮೊರ್ನೆ ವ್ಯಾನ್ ವೈಕ್, ಲೆಂಡ್ಲ್ ಸಿಮನ್ಸ್, ಅಸೋಹರ್ ಅಫೊಹಾನ್, ಜೆರೋಮ್ ಟೇಲರ್, ಪರಾಸ್ ಖಡಾ, ಸೀಕ್ಕುಗೆ ಪ್ರಸನ್ನ, ಕಮೌ ಲೆವರ್‌ರಾಕ್, ಸೈಬ್ರಾಂಡ್ ಎನೊಯೆಲ್‌ಬ್ರೆಕ್ಟ್, ಶಾನನ್ ಗೇಬ್ರಿಯಲ್, ಸಮರ್ ಕ್ವಾದ್ರಿ, ಶ್ರೀಶಾಂತ್ ಸ್ಥಾನ ಪಡೆದಿದ್ದಾರೆ.
ಅರ್ಬನ್ ರೈಸರ್ಸ್ ಹೈದರಾಬಾದ್ ತಂಡ: ಸುರೇಶ್ ರೈನಾ, ಗುರುಕೀರತ್ ಸಿಂಗ್, ಮತ್ತು ಪೀಟರ್ ಟ್ರೆಗೊ, ಸಮೀವುಲ್ಲಾ ಶಿನ್ವಾರಿ, ಜಾರ್ಜ್ ವರ್ಕರ್, ಇಸುರು ಉದಾನ, ರಿಕ್ಕಿ ಕ್ಲಾರ್ಕ್, ಸ್ಟುವರ್ಟ್ ಬಿನ್ನಿ, ಜಸ್ಕರನ್ ಮಲ್ಹೋತ್ರಾ, ಚಾಡ್ವಿಕ್ ವಾಲ್ಟನ್, ಬಿಪುಲ್ ಶರ್ಮಾ, ನುವಾನ್ ಪ್ರದೀಪ್, ಯೋಗೇಶ್ ನಗಾರ ಸ್ಥಾನ ಪಡೆದಿದ್ದಾರೆ.
ಸದರ್ನ್ ಸೂಪರ್‌ಸ್ಟಾರ್ಸ್ ತಂಡ: ದಿನೇಶ್ ಕಾರ್ತಿಕ್, ಎಲ್ಟನ್ ಚಿಗುಂಬುರಾ, ಹ್ಯಾಮಿಲ್ಟನ್ ಮಸಕಡ್ಜಾ, ಪವನ್ ನೇಗಿ, ಜೀವನ್ ಮೆಂಡಿಸ್, ಸುರಂಗ ಲಕ್ಮಲ್, ಶ್ರೀವತ್ಸ್ ಗೋಸ್ವಾಮಿ, ಹಮೀದ್ ಹಾಸನ್, ನಾಥನ್ ಕೌಲ್ಟರ್ ನೈಲ್, ಚಿರಾಗ್ ಗಾಂಧಿ, ಸುಬೋತ್ ಭಾಟಿ, ರಾಬಿನ್ ಬಿಸ್ಟ್, ಜೆಸಲ್ ಕರಿ, ಚತುರಂಗ ಡಿ ಸಿಲ್ವಾ, ಮೋನು ಕುಮಾರ್ ಸ್ಥಾನ ಪಡೆದಿದ್ದಾರೆ.