ನಟ ದರ್ಶನ್ ಈಗ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಐಷಾರಾಮಿ ಬದುಕು ಸಾಗಿಸುತ್ತಿದ್ದಾರೆ ಎನ್ನುವ ಫೋಟೋ ಹಾಗೂ ವಿಡಿಯೋ ವೈರಲ್ ಆಗುತ್ತಿದ್ದಂತೆ ಸರ್ಕಾರ ಗರಂ ಆಗಿತ್ತು. ಸಿಎಂ ಸಿದ್ದರಾಮಯ್ಯ ಅವರು ಬೇರೆ ಜೈಲುಗಳಿಗೆ ಶಿಫ್ಟ್ ಮಾಡುವಂತೆ ಸೂಚಿಸಿದ್ದರು. ಕೋರ್ಟ್ ಕೂಡ ಬೇರೆ ಜೈಲಿಗೆ ಶಿಫ್ಟ್ ಮಾಡಲು ಸೂಚಿಸಿತ್ತು. ಇದರ ಬೆನ್ನಲ್ಲಿಯೇ ದರ್ಶನ್ ಬಳ್ಳಾರಿ ಜೈಲು ಪಾಲಾಗಿದ್ದು, ಅಲ್ಲಿನ ಪರಿಸರಕ್ಕೆ ಮೊದಲ ದಿನ ಹೊಂದಿಕೊಂಡಿಲ್ಲ ಎನ್ನಲಾಗಿದೆ.
ಬಳ್ಳಾರಿ ಜೈಲಿನಲ್ಲಿ ದರ್ಶನ್ ರಾತ್ರಿಯಿಡೀ ನಿದ್ದೆ ಇಲ್ಲದೆ ಒದ್ದಾಡಿದ್ದಾರೆ. ಬಳ್ಳಾರಿ ಜೈಲಿನಲ್ಲಿ ದರ್ಶನ್ ಮೊದಲ ದಿನ ಕಳೆದಿದ್ದಾರೆ. ರಾತ್ರಿ 1 ಗಂಟೆವರೆಗೆ ನಿದ್ದೆ ಮಾಡದೆ ಒದ್ದಾಡಿದ್ದಾರೆ. ಜೈಲಿಗೆ ಅವರು ಹೊಂದಿಕೊಂಡಿಲ್ಲ. ಜೈಲಿನಲ್ಲಿ ಬೆಳಗಿನ ಉಪಾಹಾರಕ್ಕೆ ಉಪ್ಪಿಟ್ಟು ತಿಂದಿದ್ದಾರೆ. ಅವರಿಗೆ ಜೈಲಿನ ನಿಯಮದಂತೆ 355 ಗ್ರಾಂ ಉಪ್ಪಿಟ್ಟು ನೀಡಲಾಗಿದೆ. ಬಳ್ಳಾರಿ ಜೈಲಿಗೆ ದರ್ಶನ್ ಅವರನ್ನು ಆಗಸ್ಟ್ 29ರಂದು ಶಿಫ್ಟ್ ಮಾಡಲಾಗಿತ್ತು. ಗುರುವಾರ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ಬಿಟ್ಟಿದ್ದರು.
ದರ್ಶನ್ ಗೆ ಜೈಲಿನಲ್ಲಿ ಭೇಟಿ ಮಾಡಲು ಕುಟುಂಬಸ್ಥರನ್ನು ಬಿಟ್ಟರೆ ಬೇರೆಯವರಿಗೆ ಅವಕಾಶವಿಲ್ಲ. ಹೀಗಾಗಿ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ದರ್ಶನ್ ರನ್ನು ಭೇಟಿ ಮಾಡುವಂತಿಲ್ಲ.