ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಆಂಡ್ ಗ್ಯಾಂಗ್ ಪರಪ್ಪನ ಅಗ್ರಹಾರದಲ್ಲಿದ್ದರು. ಆದರೆ, ದರ್ಶನ್ ಗೆ ಅಲ್ಲಿ ಐಷಾರಾಮಿ ಟ್ರೀಟ್ಮೆಂಟ್ ಸಿಗುತ್ತಿದೆ ಎಂಬುವುದು ಸಾಬೀತಾಗುತ್ತಿದ್ದಂತೆ ಗ್ಯಾಂಗ್ ನ್ನು ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತಿರಸಲಾಗಿದೆ.
ಹೀಗಾಗಿ ಈಗ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ಪರಪ್ಪನ ಅಗ್ರಹಾರದಲ್ಲಿದ್ದಂತೆ ಬಳ್ಳಾರಿಯಲ್ಲಿಯೂ ಅವರಿಗೆ ಸವಲತ್ತು ಸಿಗಲಿದೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ, ಬಳ್ಳಾರಿ ಜೈಲಿನಲ್ಲಿನ ಕಾರಾಗೃಹ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲು ಉತ್ತರ ಡಿಐಜಿ ವಿಶೇಷ ಆದೇಶ ನೀಡಿದ್ದಾರೆ ಎನ್ನಲಾಗಿದೆ.
ಬಳ್ಳಾರಿ ಸೆಂಟ್ರಲ್ ಜೈಲಿಗೆ ಆರೋಪಿ ನಟ ದರ್ಶನ್ ಬೆಳ್ಳಿಗೆ ಹೋಗಿದ್ದಾರೆ. ಆದರೆ, ದರ್ಶನ್ ಅಲ್ಲಿನ ಹೈ ಸೆಕ್ಯೂರಿಟಿ ಸೆಲ್ ಕಂಡು ನಟ ಶಾಕ್ ಆಗಿದ್ದಾರೆ ಎನ್ನಲಾಗಿದೆ. ಮೊದಲ ಗೇಟ್ ಗೆ ಎಂಟ್ರಿಯಾಗುತ್ತಿದ್ದಂತೆ ತಲೆ ಚಚ್ಚಿಕೊಂಡಿದ್ದಾರೆ. ಸದ್ಯ ಬಳ್ಳಾರಿ ಜೈಲಿನ ಹೈಸೆಕ್ಯೂರಿಟಿಯ 15ನೇ ಸೆಲ್ ನಲ್ಲಿ ದರ್ಶನ್ ರನ್ನು ಇಡಲಾಗಿದೆ. ಅಲ್ಲದೇ, ಕಟ್ಟುನಿಟ್ಟಿನ ಕ್ರಮಕ್ಕೂ ಆದೇಶ ನೀಡಲಾಗಿದೆ ಎಂದು ತಿಳಿದು ಬಂದಿದೆ.
ನಿಗಾ ವಹಿಸಲು 24 ಗಂಟೆಯೂ ಸಿಸಿಟಿವಿ ಕಣ್ಗಾವಲು ಅಲ್ಲಿ ಇರಲಿದೆ. ದರ್ಶನ್ ಪತ್ನಿ, ರಕ್ತ ಸಂಬಂಧಿಗಳು ಹಾಗೂ ವಕಾಲತ್ತು ವಹಿಸಿದ ವಕೀಲರಿಗೆ ಮಾತ್ರ ಕಾರಾಗೃಹದ ನಿಯಮಾನುಸಾರ ಸಂದರ್ಶನ ನೀಡಲು ಅವಕಾಶ ನೀಡಲಾಗಿದೆ. ಹೀಗಾಗಿ ಯಾವುದೇ ಸೆಲೆಬ್ರಿಟಿಗಳು ದರ್ಶನ್ ರನ್ನು ಭೇಟಿಯಾಗುವಂತಿಲ್ಲ. ದರ್ಶನ್ ರನ್ನು ಬಂಧಿಯಂತೆಯೇ ನೋಡಿಕೊಳ್ಳಲು ಸೂಚಿಸಲಾಗಿದೆ.
ಯಾವುದೇ ವಿಶೇಷ ಆತಿಥ್ಯ ನೀಡದಂತೆ ಅಲ್ಲಿನ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪ್ರತಿನಿತ್ಯ ಶೇಖರಣೆ ಮಾಡಿಪ್ರತ್ಯೇಕವಾಗಿ ಇಟ್ಟುಕೊಳ್ಳಲು ನಿರ್ಧರಿಸಲಾಗಿದೆ. ಕರ್ತವ್ಯಕ್ಕೆ ಮುಖ್ಯ ವೀಕ್ಷಕ ಮತ್ತು ಅದಕ್ಕಿಂತ ಮೇಲ್ಪಟ್ಟ ಹಿರಿಯ ಅನುಭವವುಳ್ಳ ಸಿಬ್ಬಂದಿ ವರ್ಗದವರನ್ನು ನಿಯೋಜಿಸಲಾಗುತ್ತಿದೆ. ನಿಷೇಧಿತ ವಸ್ತುಗಳು ಇಲ್ಲದಂತೆ ನೋಡಿಕೊಳ್ಳುವುದು. ಅಲ್ಲಿನ ಅಧಿಕಾರಿಗಳು ಬಾಡಿವೋರ್ನ್ ಕ್ಯಾಮರಾಗಳನ್ನು ಧರಿಸುವಂತೆ ಸೂಚಿಸಲಾಗಿದೆ.
ಉಪಹಾರ ಗೃಹ, ಮನರಂಜನೆ ಸೌಲಭ್ಯಗಳನ್ನು ಕಾರಾಗೃಹದ ನಿಯಮಾವಳಿಗಳಂತೆಯೇ ನೀಡಲು ಸೂಚಿಸಲಾಗಿದೆ. ಬೇರೆ ಕೈದಿಗಳೊಂದಿಗೆ ಬೆರೆಯದಂತೆ ಕೂಡ ನೋಡಿಕೊಳ್ಳಲು ಸೂಚಿಸಲಾಗಿದೆ.