ಬಳ್ಳಾರಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿ ಬದುಕು ಅನುಭವಿಸುತ್ತಿರುವುದು ಬಹಿರಂಗವಾಗುತ್ತಿದ್ದಂತೆ ದರ್ಶನ್ ಗೆ ಸಂಕಷ್ಟ ಶುರುವಾಗಿದೆ.
ನಟ ದರ್ಶನ್ನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿ 24ನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ. ರೇಣುಕಾಸ್ವಾಮಿ ಕೇಸ್ನಲ್ಲಿ ಜೈಲಿನಲ್ಲಿರುವ ದರ್ಶನ್ ರನ್ನು ಸದ್ಯ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿದೆ. ಅಲ್ಲದೇ, ದರ್ಶನ್ ರ ಗ್ಯಾಂಗ್ ಕೂಡ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಆಗಲಿದೆ. ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಇನ್ನಿತರ ಆರೋಪಿಗಳನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದರು. ಹೀಗಾಗಿ ವಿಚಾರಣೆ ನಡೆಸಿದ ಕೋರ್ಟ್ ಆರೋಪಿಗಳನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಿ ಆದೇಶ ಹೊರಡಿಸಿದೆ.
ಕೋರ್ಟ್ ಆದೇಶ ಹಿನ್ನೆಲೆ ಇತ್ತ ಅಲರ್ಟ್ ಆದ ಬಳ್ಳಾರಿ ಜೈಲು ಅಧಿಕಾರಿಗಳು, ಜೈಲಿನ ವಿಐಪಿ ಸೆಲ್ ಗಳ ಅಂತಿಮ ಹಂತದ ಪರಿಶೀಲನೆ ನಡೆಸಿದ್ದಾರೆ. ಜೈಲಿನ ಸಿಸಿ ಕ್ಯಾಮರಾಗಳನ್ನು ಸಹ ಪರಿಶೀಲಿಸಿದರು. ಹಾಗೇ ವಿಐಪಿ ಸೆಲ್ ಗಳ ಅಂತಿಮ ಹಂತದ ಪರಿಶೀಲನೆ ನಡೆಸಿದ್ದು, ಮಧ್ಯರಾತ್ರಿ ದರ್ಶನ್ ರನ್ನು ಜೈಲಿಗೆ ಕರೆ ತರುವ ಸಾಧ್ಯತೆ ಇದೆ. ಹೀಗಿಗ ಜೈಲಿನ ಸುತ್ತಲೂ ಫುಲ್ ಟೈಟ್ ಸೆಕ್ಯೂರಿಟಿ ಕಲ್ಪಿಸಲಾಗಿದೆ. ದರ್ಶನ್ ರನ್ನು ಅಟ್ಯಾಚ್ ಬಾತ್ ರೂಮ್ ಇರುವ ಸೆಲ್ ನಲ್ಲಿ ಇರಿಸುವ ಸಾಧ್ಯತೆ ಇದೆ.