ನವದೆಹಲಿ: ಮೇಲ್ಮನೆಗೆ 12 ಜನ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
9 ಬಿಜೆಪಿ ಸದಸ್ಯರು ಮತ್ತು ಇಬ್ಬರು ಮಿತ್ರಪಕ್ಷಗಳಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ 9 ಜನ ಸದಸ್ಯರಿಂದಾಗಿ ಬಿಜೆಪಿಯ ಬಲ 96ಕ್ಕೆ ಏರಿಕೆ ಕಂಡಿದೆ. ಈ ಮೂಲಕ ಮೇಲ್ಮನೆಯಲ್ಲಿ ಎನ್ ಡಿಎ ಬಲ 112ಕ್ಕೆ ಏರಿಕೆ ಕಂಡಿದೆ. ಅವಿರೋಧವಾಗಿ ಆಯ್ಕೆಯಾದ ಇತರ ಮೂವರಲ್ಲಿ ಎನ್ ಡಿಎ ಮಿತ್ರಪಕ್ಷಗಳಾದ ಅಜಿತ್ ಪವಾರ್ ನೇತೃತ್ವದ ಎನ್ ಸಿಪಿ ಬಣ ಮತ್ತು ರಾಷ್ಟ್ರೀಯ ಲೋಕ ಮಂಚ್ ನಿಂದ ತಲಾ ಒಬ್ಬರು ಆಯ್ಕೆಯಾಗಿದ್ದಾರೆ. ಆಡಳಿತಾರೂಢ ಮೈತ್ರಿಕೂಟಕ್ಕೆ 6 ನಾಮನಿರ್ದೇಶಿತ ಹಾಗೂ ಓರ್ವ ಸ್ವತಂತ್ರ ಸದಸ್ಯರ ಬೆಂಬಲವೂ ಇದೆ.
ಕಾಂಗ್ರೆಸ್ ನಿಂದ ಓರ್ವ ಸದಸ್ಯರು ಚುನಾಯಿತರಾಗಿದ್ದಾರೆ. ಹೀಗಾಗಿ ಪ್ರತಿಪಕ್ಷಗಳ ಸಂಖ್ಯೆ 85ಕ್ಕೆ ಏರಿಕೆ ಕಂಡಿದೆ. ರಾಜ್ಯಸಭೆಯು 245 ಸ್ಥಾನಗಳನ್ನು ಹೊಂದಿದೆ. ಆದರೂ 8 ಹುದ್ದೆಗಳು ಖಾಲಿ ಇವೆ. ಜಮ್ಮು ಮತ್ತು ಕಾಶ್ಮೀರದಿಂದ 4 ಮತ್ತು 4 ನಾಮನಿರ್ದೇಶಿತ ಸ್ಥಾನಗಳಿವೆ. ಬಹುಮತ ಸಾಬೀತುಪಡಿಸಲು 119 ಸ್ಥಾನಗಳ ಅಗತ್ಯವಿದೆ. ಮಿತ್ರಪಕ್ಷಗಳು ಹಾಗೂ ಪಕ್ಷೇತರರ ಬೆಂಬಲದೊಂದಿಗೆ ಎನ್ ಡಿಎ ಆ ಗಡಿ ದಾಟಿ ನಿಂತಿದೆ. ಹೀಗಾಗಿ ವಿಪಕ್ಷಗಳ ಭಯ ಎನ್ ಡಿಎ ಕೂಟಕ್ಕೆ ಇಲ್ಲದಾಗಿದೆ.