ಬೆಂಗಳೂರು: ಹಿಂದಿನ ವರ್ಷದಲ್ಲಿಯೇ ಮಹಾರಾಷ್ಟ್ರದ ಸಿಂಧುದುರ್ಗ್ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ ಮರಾಠಾ ಯೋಧ ಛತ್ರಪತಿ ಶಿವಾಜಿ ಮಹಾರಾಜ್ (Chhatrapati Shivaji Maharaj) ಅವರ 35 ಅಡಿ ಎತ್ತರದ ಪ್ರತಿಮೆ ನೆಲಕ್ಕುರುಳಿರುವ ಘಟನೆ ನಡೆದಿದೆ.
ಛತ್ರಪತಿ ಶಿವಾಜಿ ಪ್ರತಿಮೆ ಕುಸಿದು ಪುಡಿಪುಡಿಯಾಗಿದೆ. ಘಟನೆಯ ನಂತರ, ವಿರೋಧ ಪಕ್ಷಗಳು ಏಕನಾಥ್ ಶಿಂಧೆ ನೇತೃತ್ವದ ಭಾರತೀಯ ಜನತಾ ಪಕ್ಷ-ಶಿವಸೇನೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಕಳಪೆ ಗುಣಮಟ್ಟದ ಕೆಲಸದಿಂದಾಗಿ ಹೀಗಾಗಿ ಎಂದು ಆರೋಪಿಸಿದ್ದಾರೆ.
ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ, ಸಿಂಧುದುರ್ಗದಲ್ಲಿ ಸ್ಥಾಪಿಸಲಾದ ಛತ್ರಪತಿ ಶಿವಾಜಿ ಮಹಾರಾಜ್ ಅವರ ಪ್ರತಿಮೆ ಕುಸಿದಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಮೋದಿ ಅವರು ಈ ಪ್ರತಿಮೆ ಉದ್ಘಾಟಿಸಿದ್ದರು. ಥಾಣೆ ಮೂಲದ ಗುತ್ತಿಗೆದಾರರಿಗೆ ಕೆಲಸವನ್ನು ನೀಡಿರುವುದು ಸರಿಯೇ? ಗುತ್ತಿಗೆದಾರರ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದ್ದಾರೆ.
ಶಿವಾಜಿ ಮಹಾರಾಜ್ ಅವರೊಂದಿಗೆ ನಂಟು ಹೊಂದಿದೆ ನಾವು ಅವನನ್ನು ದೇವರಂತೆ ಪೂಜಿಸುತ್ತೇವೆ. ಅತಿವೇಗದ ಮಾರುತದಿಂದಾಗಿ ಪ್ರತಿಮೆ ಕುಸಿದಿದೆ. ಇದು ದುರದೃಷ್ಟಕರ. ಸಚಿವರು ಅಲ್ಲಿಗೆ ಹೋಗಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಪ್ರತಿಕ್ರಿಯೆ ನೀಡಿದ್ದಾರೆ.