ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ದರ್ಶನ್ ಪಶ್ಚಾತಾಪ ಪಡುತ್ತಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಜೈಲಿನೊಳಗೆ ಆಗಿದ್ದೇ ಬೇರೆ. ಪರಪ್ಪನ ಅಗ್ರಹಾರಕ್ಕೆ ಹೋದ ಬಳಿಕ ದರ್ಶನ್ ಗೆ ಕುಖ್ಯಾತ ರೌಡಿಗಳ ಜೊತೆ ನಂಟು ಹೆಚ್ಚಾಗಿದೆ. ಈಗ ಮೂರು ಪ್ರತ್ಯೇಕ ಎಫ್ ಐಆರ್ ಗಳ ಪೈಕಿ ಎರಡರಲ್ಲಿ ದರ್ಶನ್ ಎ1 ಆಗಿದ್ದಾರೆ.
ಜೈಲಿನಲ್ಲಿ ಕಾನೂನು ಉಲ್ಲಂಘನೆ ಮಾಡಿದ್ದಕ್ಕಾಗಿ ಈ ಪ್ರಕರಣಗಳು ದಾಖಲಾಗಿವೆ. ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನಾ, ಧರ್ಮ, ಸತ್ಯ ಸೇರಿದಂತೆ ಹಲವರ ಜೊತೆ ದರ್ಶನ್ ಹೆಸರಿನಲ್ಲಿಯೂ ಕೇಸ್ ಹಾಕಲಾಗಿದೆ. ಹೀಗಾಗಿ ದರ್ಶನ್ ಗೆ ಮತ್ತಷ್ಟು ಕಾನೂನು ಸಂಕಷ್ಟ ಶುರುವಾಗಿದೆ.
ವಿಚಾರಣಾಧೀನ ಕೈದಿ ಆಗಿರುವ ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ್ದಕ್ಕಾಗಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಂದ್ರ ಕಾರಾಗೃ ಉಪನಿರ್ದೇಶಕ ಎಂ. ಸೋಮಶೇಖರ್ ಅವರಿಂದ ದೂರು ದಾಖಲಾಗಿದೆ. ಒಟ್ಟು ಮೂರೂ ಕೇಸ್ನಲ್ಲಿ ದರ್ಶನ್ ಆರೋಪಿ ಆಗಿದ್ದು, ನಟನಿಗೆ ಮತ್ತಷ್ಟು ಸಂಕಷ್ಟ ಶುರುವಾಗಿದೆ.