ವಿಶಾಖಪಟ್ಟಣಂ : ತನಗಿಂತ ತನ್ನ ಪತ್ನಿಗೆ ಹೆಚ್ಚು ಹಣ ನೀಡುತ್ತಾನೆಂದು ಗೆಳತಿಯು ತನ್ನ ಲಿವ್ ಇನ್ ಪಾರ್ಟನರ್ ನ ಮರ್ಮಾಂಗನ್ನೇ ಕತ್ತರಿಸಿರುವ ಘಟನೆ ನಡೆದಿದೆ.
ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬಿಹಾರ ಮೂಲದ ವಿಜಯ್ ಕುಮಾರ್ ಯಾದವ್ ಗಾಯಗೊಂಡ ವ್ಯಕ್ತಿ. ಈತ ಕಳೆದ ನಾಲ್ಕು ತಿಂಗಳಿನಿಂದ ತನ್ನ ಲಿವ್-ಇನ್ ಪಾರ್ಟ್ ನರ್ ಸೀತಾ ಕುಮಾರಿ ಜೊತೆ ವಾಸಿಸುತ್ತಿದ್ದ. ಆದರೂ ಆತ ತನ್ನ ದುಡಿಮೆಯಲ್ಲಿನ ಹೆಚ್ಚಿನ ಹಣವನ್ನು ಪತ್ನಿಗೆ ಕಳುಹಿಸುತ್ತಿದ್ದ. ಇದರಿಂದ ಗೆಳತೆ ಕೋಪಗೊಂಡಿದ್ದಳು. ಆಗ ಆ ವ್ಯಕ್ತಿ ಮಲಗಿದ್ದ ಸಂದರ್ಭದಲ್ಲಿ ಆತನ ಕೈ, ಕಾಲು ಕಟ್ಟಿ, ಜನನಾಂಗಕ್ಕೆ ಕತ್ತರಿ ಹಾಕಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ವಿಜಯ್ ಮತ್ತು ಸೀತಾ ಇಬ್ಬರೂ ಬಿಹಾರದ ನಿವಾಸಿಗಳು. ವಿಜಯ್ ಮದುವೆಯಾಗಿದ್ದರೂ ಆತನೊಂದಿಗೆ ಜೀವನ ಸಾಗಿಸುತ್ತಿದ್ದಳು ಎನ್ನಲಾಗಿದೆ. ಸೀತಾ ಕುಮಾರಿ ಮತ್ತು ವಿಜಯ್ ಯಾದವ್ ಕಳೆದ ನಾಲ್ಕು ತಿಂಗಳಿನಿಂದ ಇಲ್ಲಿ ವಾಸಿಸುತ್ತಿದ್ದರು. ಮಹಿಳೆ ವಿಜಯ್ ಅವರ ಖಾಸಗಿ ಭಾಗಗಳ ಮೇಲೆ ಹಲ್ಲೆ ನಡೆಸಿ ಕತ್ತರಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ನಾನು ಸಂಪಾದಿಸಿದ ಹಣವನ್ನು ಮನೆಗೆ ಕಳುಹಿಸುತ್ತಿದ್ದೆ. ಈ ಬಗ್ಗೆ ಸೀತಾ ಅದರ ಬಗ್ಗೆ ಅತೃಪ್ತಿ ಹೊಂದಿದ್ದಳು. ಊಟದ ನಂತರ ನಾನು ಮಲಗಲು ಹೋದಾಗ ಸೀತಾ ನನ್ನ ಮೇಲೆ ಹಲ್ಲೆ ಮಾಡಿದಳು ಎಂದು ಆತ ಹೇಳಿದ್ದಾರೆ. ಈ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.