ಬಿಇಎಂಎಲ್ ಲಿಮಿಟೆಡ್ ನ ಬೆಂಗಳೂರು ಘಟಕದಲ್ಲಿ ಖಾಲಿ ಇರುವ ವಿವಿಧ ಗ್ರೂಪ್ ಸಿ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಬಿಇಎಂಎಲ್ ಹೆವಿ ಇಂಜಿನಿಯರಿಂಗ್ ಕಂಪನಿ ಆಗಿದ್ದು, ಡಿಫೆನ್ಸ್, ಏರೋಸ್ಪೇಸ್, ಮೈನಿಂಗ್ ಹಾಗೂ ಕಂಸ್ಟ್ರಕ್ಷನ್, ರೇಲ್ ಮತ್ತು ಮೆಟ್ರೋ ಬ್ಯುಸಿನೆಸ್ ಸೆಕ್ಟಾರ್ ಗಳೊಂದಿಗೆ ಹೆಚ್ಚು ಕಾರ್ಯ ನಿರ್ವಹಿಸುತ್ತದೆ. ಗ್ರೂಪ್ ಸಿ ಹುದ್ದೆಗಳನ್ನು ಭರ್ತಿ ಮಾಡಲು ಪ್ರಕಟಣೆ ಹೊರಡಿಸಿದೆ.
ದೇಶದಾದ್ಯಂತ ಇರುವ ವಿವಿಧ ಬಿಇಎಂಎಲ್ ಘಟಕಗಳಿಗೂ ಈ ನೇಮಕಾತಿ ಪ್ರಕ್ರಿಯೆ ಮೂಲಕ ಗ್ರೂಪ್ ಸಿ ಪೋಸ್ಟ್ ಭರ್ತಿ ಮಾಡಲು ಮುಂದಾಗಿದೆ. ಐಟಿಐ ಹಾಗೂ ಪದವಿ, ಡಿಪ್ಲೊಮ ಪಾಸಾದವರು ಸರ್ಕಾರಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ, ಈ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು.
ಐಟಿಐ ಟ್ರೈನಿ-ಫಿಟ್ಟರ್ 7, ಐಟಿಐ ಟ್ರೈನಿ-ಟರ್ನರ್ 11, ಐಟಿಐ ಟ್ರೈನಿ- ಮಷಿನಿಸ್ಟ್ 10, ಐಟಿಐ ಟ್ರೈನಿ ವೆಲ್ಡರ್ 18, ಆಫೀಸ್ ಅಸಿಸ್ಟಂಟ್ ಟ್ರೈನಿ 46 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಐಟಿಐ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಟ್ರೇಡ್‌ವಾರು ಐಟಿಐ ಶಿಕ್ಷಣವನ್ನು ಶೇ. 60 ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ಜತೆಗೆ 3 ವರ್ಷಗಳ ಕಾರ್ಯಾನುಭವ ಹೊಂದಿರಬೇಕು. ಅಪ್ರೆಂಟಿಸ್ ತರಬೇತಿ ನಂತರದಲ್ಲಿ ಪಡೆದಿರಬೇಕು. ಸಾಮಾನ್ಯ ವರ್ಗದವರು 32 ವರ್ಷ, ಒಬಿಸಿ ವರ್ಗದವರು 35 ವರ್ಷ, ಎಸ್‌ಸಿ / ಎಸ್‌ಟಿ ವರ್ಗದವರು 37 ವರ್ಷವನ್ನು ದಾಟಿರದಿದ್ದಲ್ಲಿ ಅರ್ಜಿ ಸಲ್ಲಿಸಬಹುದು.
ಆಫೀಸ್ ಅಸಿಸ್ಟಂಟ್ ಟ್ರೈನಿ ಹುದ್ದೆಗಳಿಗೆ ಪೂರ್ಣಾವಧಿ ಪದವಿ ಅಥವಾ ಡಿಪ್ಲೊಮ ಇನ್ ಕಮರ್ಷಿಯಲ್ ಪ್ರಾಕ್ಟೀಸ್, ಸೆಕ್ರೇಟರಿಯಲ್ ಪ್ರಾಕ್ಟೀಸ್ ಅನ್ನು ಕಂಪ್ಯೂಟರ್ ಅಪ್ಲಿಕೇಶನ್ ಜತೆಗೆ ಪಾಸ್ ಮಾಡಿರಬೇಕು. ಈ ಶಿಕ್ಷಣದ ನಂತರ ಕನಿಷ್ಠ 3 ವರ್ಷ ಕಾರ್ಯಾನುಭವ ಪಡೆದಿರಬೇಕು. ಈ ಹುದ್ದೆಗೂ ಸಹ ಸಾಮಾನ್ಯ ವರ್ಗದವರು 32 ವರ್ಷ, ಒಬಿಸಿ ವರ್ಗದವರು 35 ವರ್ಷ, ಎಸ್‌ಸಿ / ಎಸ್‌ಟಿ ವರ್ಗದವರು 37 ವರ್ಷವನ್ನು ದಾಟಿರದಿದ್ದಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರು ಬಿಇಎಂಎಲ್ ಲಿಮಿಟೆಡ್‌ನ ಅಧಿಕೃತ ವೆಬ್‌ಸೈಟ್ www.bemlindia.in ಗೆ ಭೇಟಿ ನೀಡಿ ಸಲ್ಲಿಸಬಹುದು. ಸೆ. 4 ಕೊನೆಯ ದಿನವಾಗಿದೆ. 200 ರೂ. ಸಲ್ಲಿಸಿ ಅರ್ಜಿ ಸಲ್ಲಿಸಬಹುದು.
ಡೆಪ್ಯೂಟಿ ಜೆನೆರಲ್ ಮ್ಯಾನೇಜರ್ : Rs.90,000-240000, ಅಸಿಸ್ಟಂಟ್ ಜೆನೆರಲ್ ಮ್ಯಾನೇಜರ್: Rs.80000-220000,
ಸೀನಿಯರ್ ಮ್ಯಾನೇಜರ್ : Rs.70000-200000, ಮ್ಯಾನೇಜರ್ : Rs.60000-180000, ಅಸಿಸ್ಟಂಟ್ ಮ್ಯಾನೇಜರ್ : Rs.50000-160000 ವೇತನ ನಿಗದಿ ಪಡಿಸಲಾಗಿದೆ.