ಪುಣೆ: ಖಾಸಗಿ ಹೆಲಿಕಾಪ್ಟರ್ ವೊಂದು ಪತನವಾಗಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ.
ಈ ಖಾಸಗಿ ಹೆಲಿಕಾಪ್ಟರ್ ಪುಣೆಯಲ್ಲಿ ಪತನ(Helicopter crashed)ಗೊಂಡಿದೆ. ಪುಣೆಯ ಪೌಡ್ ಗ್ರಾಮದ ಹತ್ತಿರ ಶನಿವಾರ ಈ ಘಟನೆ ನಡೆದಿದೆ. ಪತನಗೊಂಡಿರುವ ಹೆಲಿಕಾಪ್ಟರ್ ನಲ್ಲಿ ನಾಲ್ವರು ಇದ್ದರು. ಅದರಲ್ಲಿದ್ದ ನಾಲ್ವರು ಗಾಯ(Four injured)ಗೊಂಡಿದ್ದಾರೆ. ನಾಲ್ವರ ಸ್ಥಿತಿಯೂ ಗಂಭೀರವಾಗಿದೆ.
ಹೈದರಾಬಾದ್(Hyderabad)ನಿಂದ ಜನರನ್ನು ಹೊತ್ತು ಚಾಪರ್(Chopper) ಮುಂಬಯಿನ ಜುಹುಗೆ ತೆರಳುತ್ತಿತ್ತು. ಒಳಗಿದ್ದ ನಾಲ್ವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಓರ್ವ ಕ್ಯಾಪ್ಟನ್ ರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
AW 139 ಮಾದರಿಯ ಹೆಲಿಕಾಪ್ಟರ್ ನಲ್ಲಿ ಆನಂದ್ ಕ್ಯಾಪ್ಟನ್, ಡೀರ್ ಭಾಟಿಯಾ, ಅಮರ್‌ದೀಪ್ ಸಿಂಗ್ ಮತ್ತು ಎಸ್‌ಪಿ ರಾಮ್ ಇದ್ದರು. ಆನಂದ್ ಕ್ಯಾಪ್ಟನ್ ರನ್ನು ಹತ್ತಿರದ ವೈದ್ಯಕೀಯ ಸೌಲಭ್ಯದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.