ಬೆಂಗಳೂರು: ರಾಜ್ಯಪಾಲರು ಸರ್ಕಾರದ ಪ್ರತಿಯೊಂದು ಕಾರ್ಯಕ್ಕೂ ಬಿಜೆಪಿ ನಾಯಕರ ಮಾತು ಕೇಳಿ ಅಡ್ಡಿಯಾಗುತ್ತಿದ್ದಾರೆ. ಅವರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ (BJP) ಶಾಸಕರ ಮಾತು ಕೇಳಿ ರಾಜ್ಯ ಸರ್ಕಾರ ಕಳಿಸಿದ 15 ವಿಧೇಯಕಗಳನ್ನು (Bills) ರಾಜ್ಯಪಾಲರು (Governor Thawar Chand gehlot) ಮರಳಿ ಕಳುಹಿಸಿದ್ದಾರೆ. ಹಾಗಾದರೆ, ಇವರು ಒಂದೇ ಪಕ್ಷದ ಬೆನ್ನಿಗೆ ನಿಲ್ಲುವುದಾದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ಏಕಿರಬೇಕು? ಎಂದು ಪ್ರಶ್ನಿಸಿ, ರಾಜ್ಯಪಾಲರ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಬೀಳಿಸಲು ವಿರೋಧಿಗಳು ಎಷ್ಟೇ ಪ್ರಯತ್ನ ನಡೆಸಿದರೂ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನಾವು ನಮ್ಮ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.
ನಾವು ಕೆಲವು ಸಚಿವರು ಹಾಗೂ ನಾಯಕರು ಒಟ್ಟಿಗೆ ದೆಹಲಿಗೆ ಹೊರಟಿದ್ದೇವೆ. ನಾವು ಬಿಜೆಪಿ ತಂತ್ರದ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ.