ಬೆಂಗಳೂರು: ಚಿನ್ನ ಹಾಗೂ ಬೆಳ್ಳಿಯ ದರ ದಿನದಿಂದ ದಿನಕ್ಕೆ ಗಗನಕ್ಕೆ ತಲುಪುತ್ತಿತ್ತು. ಈ ಮಧ್ಯೆ ಬಂಗಾರ ಪ್ರಿಯರಿಗೆ ಒಳ್ಳೆಯ ಸುದ್ದಿ ಸಿಕ್ಕಿದ್ದು, ಚಿನ್ನದ ದರ ಸತತ ಎರಡನೇ ದಿನವೂ ಇಳಿಕೆ ಕಂಡಿದೆ.
ಬೆಳ್ಳಿ ಒಂದೇ ದಿನ ಕೆಜಿಗೆ 2900 ರೂ. ತಗ್ಗಿದೆ. ಶ್ರಾವಣ ಮಾಸದ ಸಂದರ್ಭದಲ್ಲಿ ಚಿನ್ನಾಭರಣ ಕೊಳ್ಳುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಈ ಸಂದರ್ಭದಲ್ಲಿ ವರಮಹಾಲಕ್ಷ್ಮೀ ಹಬ್ಬ ಕೂಡ ಇರುತ್ತದೆ. ಹೀಗಾಗಿ ಚಿನ್ನಾಭರಣ ಹೆಚ್ಚಾಗಿ ಖರೀದಿಸುತ್ತಿರುತ್ತಾರೆ. ಈ ವೇಳೆ ಗುರುವಾರ ಮೊದಲ ಬಾರಿಗೆ ಚಿನ್ನ ಇಳಿಕೆಯಾಗಿದ್ದು, ಶುಕ್ರವಾರ ಕೂಡ ಅದೇ ಹಾದಿ ಹಿಡಿದಿದೆ. ಹೀಗಾಗಿ ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ಶುಕ್ರವಾರ 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 220 ರೂ., ಬೆಳ್ಳಿ 1 ಕೆಜಿ 2900 ರೂ., ಇಳಿಕೆಯಾಗಿದೆ.
ಕರ್ನಾಟಕದ ಮಾರುಕಟ್ಟೆಯಲ್ಲಿ ಆಗಸ್ಟ್ 23 ಶುಕ್ರವಾರ 22 ಕ್ಯಾರೆಟ್ ಚಿನ್ನದ ದರ 1 ಗ್ರಾಂಗೆ 6,660 ರೂ. ಇದೆ. 10 ಗ್ರಾಂಗೆ 65,650 ರೂ. ಇದೆ. 24 ಕ್ಯಾರೆಟ್ ಚಿನ್ನ 1 ಗ್ರಾಂಗೆ 7,265 ರೂ. ಅಂದರೆ, 10 ಗ್ರಾಂಗೆ 72,650 ರೂ. ಆಗಿದೆ.
ಬೆಂಗಳೂರು ಮಾರುಕಟ್ಟೆಯ ಪ್ರಕಾರ ಬೆಳ್ಳಿಯ ದರವು ಆಗಸ್ಟ್ 16 ರಂದು 1 ಗ್ರಾಂಗೆ 82 ರೂಪಾಯಿ ಇದೆ. ಅಂದರೆ, 1 ಕೆಜಿ ಬೆಳ್ಳಿಗೆ 82,000 ರೂ.ನಷ್ಟಿದೆ. ಒಂದೇ ದಿನಕ್ಕೆ 2,900 ರೂಪಾಯಿ ಹೆಚ್ಚಳವಾಗಿದ್ದು, ಭಾರೀ ನಿರಾಸೆ ಮೂಡಿಸಿದೆ.