ಕೊಪ್ಪಳ: ಅಕ್ರಮವಾಗಿ ಗಣಿಗಾರಿಕೆಗೆ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಯವರ ಕ್ರಮದ ಬಗ್ಗೆ ಎದ್ದಿದ್ದ ಪುಕಾರಿನ ಬಗ್ಗೆ ಸಿಎಂ ಸ್ಪಷ್ಟನೆ ಇದಾಗಿತ್ತು.
ಇಂದು ಆಲಮಟ್ಟಿ ಜಲಾಶಯ ಭರ್ತಿಯಾದ ಸಂತೋಷದಲ್ಲಿ ಭಾಗೀನ ಅರ್ಪಿಸಲು ಬಂದಿದ್ದ ಸಿಎಂ ಸಿದ್ದರಾಮಯ್ಯ, ಮಾರ್ಗ ಮಧ್ಯದ ಗಿಣಿಗೇರಿಯಲ್ಲಿ ಮಾಧ್ಯಮದೊಂದಿಗೆ ಮಾತಾಡಿದರು. ಈ ವೇಳೆ ಕೇಳಲಾದ ಎಚ್ಡಿಕೆ ಪ್ರಕರಣದ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು ” ಕುಮಾರಸ್ವಾಮಿಗೆ ಭಯ ಶುರುವಾಗಿದೆ. ರಾಜ್ಯಪಾಲರು ಕೇಳಿದ ದಾಖಲಾತಿಗಳನ್ನು ಲೋಕಾಯುಕ್ತದವರು ಒದಗಿಸಿದರೇ, ಪ್ರಾಸಿಕ್ಯೂಷನ್ (prosecution)ಗೆ ಅನುಮತಿಸುತ್ತಾರೇನೋ ಎಂಬ ಭಯ ಶುರುವಾಗಿದೆ.
ನಿಯಮ ಉಲ್ಲಂಘಿಸಿ ಅಕ್ರಮವಾಗಿ ಗಣಿಗಾರಿಕೆಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಕುಮಾರಸ್ವಾಮಿಯವರನ್ನು ಬಂಧಿಸುತ್ತೇವೆ ಎಂದು ನಾನು ಎಲ್ಲೂ ಹೇಳಿಲ್ಲ. ಸದ್ಯ ಆ ಪರಿಸ್ಥಿತಿ ಬಂದಿಲ್ಲ. ಅಂಥ ಸಮಯ ಬಂದರೇ ಎಚ್ಡಿಕೆ ಮೇಲೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇನೆ ಎಂದರು.