ಹೃದಯಾಘಾತಗಳು ಇತ್ತೀಚೆಗೆ ಯಾರನ್ನು ಯಾವ ರೀತಿ ಬಲಿ ಪಡೆಯುತ್ತದೆ ಎನ್ನುವುದೇ ಗೊತ್ತಾಗುತ್ತಿಲ್ಲ. ಚಿಕ್ಕಮಕ್ಕಳು, ಯುವಕ-ಯುವತಿಯರು ಇತ್ತೀಚೆಗೆ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಆತಂಕ್ಕೆ ಕಾರಣವಾಗುತ್ತಿದೆ. ಇಂತಹುದೇ ಘಟನೆಯೊಂದು ಈಗ ನಡೆದಿದ್ದು, ಯುವಕನೊಬ್ಬ ವೈದ್ಯರ ಮುಂದೆಯೇ ಚಿಕಿತ್ಸೆ ಪಡೆಯುತ್ತಿದ್ದಾಗ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.
ಯುವಕನೊಬ್ಬ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಅವರ ಎದುರು ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ. ಪರದೇಸಿಪುರ ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಈ ಘೋರ ದೃಶ್ಯ ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ವೈರಲ್ ಆಗುತ್ತಿದೆ.
ಸೋನು ಹೃದಯಾಘಾತಕ್ಕೆ ಬಲಿಯಾಗಿರುವ ಯುವಕ. ಈತ ಆಟೋ ಚಾಲಕನಾಗಿದ್ದ ಎನ್ನಲಾಗಿದೆ. ಆದರೆ, ಭಾನುವಾರ ರಾತ್ರಿ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದಾನೆ. ಅಲ್ಲಿ ವೈದ್ಯರು ಚೆಕಪ್ ಮಾಡುತ್ತಿರುವಾಗಲೇ ಇದ್ದಕ್ಕಿದ್ದಂತೆ, ಕುಸಿದುಬಿದ್ದು ಸಾವನಪ್ಪಿದ್ದಾನೆ.
ಈ ದೃಶ್ಯ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೋನು ವೈದ್ಯರೊಂದಿಗೆ ಮಾತನಾಡುತ್ತಿರುವುದು ಇದೆ. ನಂತರ ವೈದ್ಯರು ಸೋನುಗೆ ಪರೀಕ್ಷಿಸಲು ಆರಂಭಿಸಿದ್ದಾರೆ. ಇದ್ದಕ್ಕಿದ್ದಂತೆ, ಸೋನು ವೈದ್ಯರ ಮುಂದೆ ಕುಸಿದು ಬಿದ್ದಿದ್ದಾನೆ. ಬದುಕಿಸಲು ವೈದ್ಯಕೀಯ ಸಿಬ್ಬಂದಿ ತಕ್ಷಣದ ಪ್ರಯತ್ನ ಮಾಡಿದರೂ ಸೋನು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಇಂದೋರ್‌ನ ಪರದೇಶಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆಸ್ಪತ್ರೆಗೆ ಬಂದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಸೋನು ಹೃದಯ ಸ್ತಂಭನಕ್ಕೆ ಬಲಿಯಾಗಿರುವುದು ತಿಳಿದು ಬಂದಿದೆ.