ಇತ್ತೀಚೆಗೆ ಮೋಸ ಮಾಡುವವರು ಯಾವ ರೀತಿ ಮಾಡುತ್ತಾರೆ ಎಂಬುವುದನ್ನೇ ಊಹಿಸಿಕೊಳ್ಳುವುದು ಅಸಾಧ್ಯವಾಗುತ್ತಿದೆ. ಆನ್ ಲೈನ್ ವಂಚಕರಂತೂ ಯಾವ ರೀತಿ ಯಾಮಾರಿಸುತ್ತಾರೆ ಎಂಬುವುದೂ ತಿಳಿಯುವುದಿಲ್ಲ. ಡಿಜಟಲೀಕರಣ ಎಷ್ಟು ಉಪಯುಕ್ತವೋ? ಅಷ್ಟೇ ವಂಚನೆಗೆ ದಾರಿ ಮಾಡಿಕೊಡುತ್ತಿದೆ. ಇಲ್ಲೊಬ್ಬ ಖತರ್ನಾಕ್ ವ್ಯಕ್ತಿ ದೇವಸ್ಥಾನದ ಹುಂಡಿಗೆ ಕ್ಯೂರ್ ಆರ್ ಕೋಡ್ ಹಾಕಿ, ಲಕ್ಷಾಂತರ ದೋಚಿರುವ ಘಟನೆ ಬೆಳಕಿಗೆ ಬಂದಿದೆ.
ಈತ ಹಲವಾರು ಬೌದ್ಧ ದೇವಾಲಯಗಳ ಹೆಸರಿನಲ್ಲಿ ದೇಣಿಗೆ ಹಣ ಪಡೆದು ವಂಚಿಸಿದ್ದಾನೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚೀನಾದ ವ್ಯಕ್ತಿಯನ್ನು ಬಂಧಿಸಲಾಗಿದೆ. ಈತ ದೇವಸ್ಥಾನದ ಹುಂಡಿಯ ಕ್ಯೂಆರ್ ಕೋಡ್ ಮೇಲೆ ತನ್ನ ವೈಯಕ್ತಿಕ ಬ್ಯಾಂಕ್ ಖಾತೆಯ ಕ್ಯೂಆರ್ ಕೋಡ್ ಅಂಟಿಸಿದ್ದ ಎನ್ನಲಾಗಿದೆ. ಇದರೊಂದಿಗೆ ಮನೆ ಮನೆಗೆ ಭೇಟಿ ನೀಡಿ ದೇವಾಲಯಗಳ ದೇಣಿಗೆಯ ಹೆಸರಿನಲ್ಲಿ ತನ್ನ ಖಾತೆಗೆ ಹಣ ವರ್ಗಾಯಿಸುತ್ತಿದ್ದ. ಈತನ ಕಳ್ಳಾಟ ಈಗ ಬಯಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ.
ಈ ಖದೀಮ ಪ್ರತಿಷ್ಠಿತ ವಿಶ್ವವಿದ್ಯಾಲಯದಿಂದ ಕಾನೂನಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾನೆ ಎಂದು ವರದಿಗಳು ಸೂಚಿಸಿವೆ. ಒಂದೇ ವರ್ಷದಲ್ಲಿ ಶಾಂಕ್ಸಿ, ಸಿಚುವಾನ್ ಮತ್ತು ಚಾಂಗ್‌ಕಿಂಗ್ ಪ್ರಾಂತ್ಯಗಳಲ್ಲಿನ ದೇವಾಲಯಗಳಿಂದ 30,000 ಯುವಾನ್ (ಅಂದಾಜು 3.5 ಲಕ್ಷ ರೂ.) ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಒಪ್ಪಿಕೊಂಡಿದ್ದಾನೆ.
ಕ್ಯೂರ್ ಆರ್ ಕೋಡ್ ಗಮನಿಸಿ ಹಾಗೂ ದೇವಸ್ಥಾನಕ್ಕೆ ದೇಣಿಗೆ ಕಡಿಮೆಯಾಗಿರುವುದನ್ನು ಗಮನಿಸಿ ದೇವಸ್ಥಾನದ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಶಾಂಕ್ಸಿ ಪೊಲೀಸರು ತನಿಖೆ ನಡೆಸಿ ದೇವಸ್ಥಾನದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ, ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.